

ವಿಜಯವಾಣಿ ಸುದ್ದಿಜಾಲ ಗದಗ
ನೇಮಕಾತಿ, ಸೇವೆ ,ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಗ್ರಾಪಂ ನೌಕರ ಸಿಬ್ಬಂದಿ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಮಂಗಳವಾರ ಅನಿದಿರ್ಷ್ಠಾವದಿ ಪ್ರತಿಭಟನೆ ಆರಂಭಿಸಿದರು. ಗ್ರಾಪಂ ಪಿಡಿಓ, ಕಾರ್ಯದಶಿರ್, ಡಾಟಾ ಎಂಟ್ರಿ ಆಪರೇಟರ್, ಇತರೆ ಗ್ರಾಮ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಗ್ರಾಪಂ ಪಿಡಿಓ ಜಿಲ್ಲಾ ಸಂದ ಅಧ್ಯಕ್ಷ ಕುಮಾರ ಪೂಜಾರ ಮಾತನಾಡಿ, ಬಡ್ತಿ, ಗ್ರಾಪಂಗಳ ಗ್ರೇಡ್ಗಳನ್ನು ಹೆಚ್ಚಿಸುವುದು, ಬಡ್ತಿಯಲ್ಲಿನ ಸಮಸ್ಯೆ ನಿವಾರಣೆ, ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಈ ಪ್ರತಿಟಭನೆ ನಡೆಸಲಾಗುತ್ತಿವೆ. ಈ ವರೆಗೂ ಸರ್ಕಾರ ನಮ್ಮ ಮನವಿಗೆ ಸ್ಪಂಧಿಸಿಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದೆವರೆಯುತ್ತದೆ. ಅಲ್ಲಿಯವರೆಗೆ ಗ್ರಾಮ ಪಂಚಾಯತಿಯ ಯಾವುದೇ ಸೇವೆಗಳನ್ನು ನೀಡುವುದಿಲ್ಲ ಎಂದು ಗ್ರಾಪಂ ಪಿಡಿಓ ಸಂದ ಜಿಲ್ಲಾಧ್ಯಕ್ಷ ಕುಮಾರ ಪೂಜಾರ ಹೇಳಿದರು.
ಗ್ರಾಪಂ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಸೋಮರೆಡ್ಡಿ ನಡವೂರು ಮಾತನಾಡಿ, ಸರ್ಕಾರಿಂದ ಗ್ರಾಪಂಗಳಿಗೆ ಸೂಕ್ತ ಸಹಕಾರ ಸಿಗುತ್ತಿಲ್ಲ. ಪಿಡಿಓ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ವೃಂದಕ್ಕೆ ಮೇಲ್ದೆರ್ಜೆಗೆ ಹೆಚ್ಚಿಸುವಂತೆ ಹಲವು ವರ್ಷದ ಬೇಡಿಕೆ ಇದ್ದರೂ ಪರಿಗಣಿಸದೇ ಪ್ರಸ್ತುತ ಇರುವ 6021 ಹುದ್ದೆಗಳಲ್ಲಿಯೇ 1500 ಹುದ್ದೆಗಳನ್ನು ಕಡಿಮೆ ಮಾಡಿ ನಿಯಮ ಬಾಹಿರವಾಗಿ ಹಿರಿಯ ಪಿಡಿಓ ಹುದ್ದೆ ಸೃಷ್ಟಿಸಲಾಗಿದೆ. ವರ್ಗಾವಣೆಗೆ ನಡೆಸುತ್ತಿರುವ ಕೌನ್ಸಿಲಿಂಗ್ ಪದ್ಧತಿಯಲ್ಲೂ ಹಲವು ಲೋಪದೋಷಗಳಿವೆ ಎಂದು ಆರೋಪಿಸಿದರು.
ಮಾಹಂತೇಶ ಕೋತ, ಅಶ್ವಿನಿ ಕುರಡಗಿ, ಮಹಾಂತೇಶ ತಳವಾರ, ಸವಿತಾ ಸೋಮಣ್ಣವರ, ಶೀವಲೀಲಾ ಗೋಳಪ್ಪನ್ನವರ, ಮಾಲತೇಶ ಮೇವುಂಡಿ, ಸಂತೋಷ ಹೂಗಾರ, ಮಂಜುನಾಥ ಗಣಿ ಇತರರು ಇದ್ದರು.