

ಕೆಂಭಾವಿ : ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವವಿದೆ. ದುಖಿತ ಮನಸ್ಸನ್ನು ಸಶಕ್ತಗೊಳಿಸಿ ಆತ್ಮಬಲ ತುಂಬುವ ಚೈತನ್ಯವೇ ಗುರು ಎಂದು ಯಾದಗಿರಿ ನೂತನ ಜಿಲ್ಲಾ ಪಂಚಾಯಿತ ಅಧ್ಯಕ್ಷ ಬಸನಗೌಡ ಪಾಟೀಲ್ ಯಡಿಯಾಪುರ ಹೇಳಿದರು.
ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠಕ್ಕೆ ಭಾನುವಾರ ಭೇಟಿ ನೀಡಿ ಪೀಠಾಧಿಪತಿ ಶಾಂತರುದ್ರಮುನಿ ಸ್ವಾಮೀಜಿ ಅವರಿಂದ ಆಶೀವರ್ಾದ ಪಡೆದು ಮಾತನಾಡಿದ ಅವರು, ಮನುಷ್ಯನು ಬದುಕಿನಲ್ಲಿ ಕಷ್ಟ ಸುಖಗಳು ಆಗಾಗ ಬರುವುದು ಸಹಜ ದುಃಖಿತ ಮನಸ್ಸಿಗೆ ಮಾರ್ಗದರ್ಶನ ಅವಶ್ಯಕತೆ ಇರುತ್ತದೆ. ಆ ದಿಸೆಯಲ್ಲಿ ಕರಡಕಲ್ ಅಪ್ಪಾಜಿಯವರು ಮಾರ್ಗದರ್ಶನ ಹಾಗೂ ಆರ್ಶಿವಾದ ನನಗೂ ನನ್ನ ಕ್ಷೇತ್ರದ ಜನತೆಯ ಮೇಲಿರಲಿ ಎಂದು ಪ್ರಾರ್ಥಿಸಿದರು.
ಸಿದ್ರಾಮಯ್ಯ ಹಿರೇಮಠ, ಸಂಗನಗೌಡ ಮರಡ್ಡಿ, ಬಾಪುಗೌಡ ಪಾಟೀಲ್, ನಾನಾಗೌಡ ಮೇಟಿ, ಸಿದ್ದನಗೌಡ ಮಾಳಹಳ್ಳಿ, ಮಲ್ಲನಗೌಡ ಹೊಸಗೌಡ್ರು, ಪ್ರಭುದೊರಿ, ದೇವಿಂದ್ರಪ್ಪ ಹಾಲಗಡ್ಲಿ, ಸಿದ್ದನಗೌಡ ಡಳವಾರ, ಹಣಮಗೌಡ ಮಂಗಳೂರ, ಬಸನಗೌಡ ಮರಡ್ಡಿ, ಮಾನಸಣ್ಣ ಘಂಟಿ, ಗೋಪಣ್ಣ ಅಂಚೆಸೂಗೂರು, ಭೀಮನಗೌಡ ಪಾಟೀಲ್, ಮಲಕನಗೌಡ ಮರಡ್ಡಿ, ಕೃಷ್ಣ ನಾಟೀಕಾರ, ವಿರುಪಾಕ್ಷಿ ಗುಡುಮನಿ, ಶ್ರೀಮಠದ ವಕ್ತಾರ ಶಿವಪ್ರಕಾಶ, ಮಲ್ಲಿಕಾಜರ್ುನ ಪರಸನಹಳ್ಳಿ, ದೇವಿಂದ್ರ ಕುಂಬಾರ ಇತರರಿದ್ದರು.