ಗ್ರಾಪಂಗೆ ಬೀಗ ಹಾಕಿದ ನೌಕರ ಬಾಕಿ ವೇತನ ಪಾವತಿಗೆ ಆಗ್ರಹ

IMG-20220907-WA0013.jpg
Published on

ಕನಕಗಿರಿ (ಕೊಪ್ಪಳ): ತಾಲೂಕಿನ ಗೌರಿಪುರ ಗ್ರಾಪಂನಲ್ಲಿ ಸ್ವಚ್ಛತಾ ಸಿಬ್ಬಂದಿಯೋರ್ವ ಸೇವೆ ಕಾಯಂಗೊಳಿಸುವಂತೆ ಹಾಗೂ ಬಾಕಿ ವೇತನ ಪಾವತಿಗೆ ಆಗ್ರಸಿ ಗ್ರಾಪಂ ಕಚೇರಿಗೆ ಬೇಲಿ ಹಾಕಿದ್ದಾನೆ.

ಜಗದೀಶಗೌಡ ಎಂಬಾತ ಬೇಲಿ‌ಹಾಕಿದಾತ. ಈತನ ಪೂರ್ವಜರು ಗ್ರಾಪಂ ಕಟ್ಟಡಕ್ಕೆ ಭೂದಾನ ನೀಡಿದ್ದಾರೆ. ಹೀಗಾಗಿ ಕೆಲ ದಿನಗಳ ಹಿಂದೆ ಜಗದೀಶಗೌಡನಿಗೆ ಸ್ವಚ್ಛತಾ ಸಿಬ್ಬಂದಿ ಎಂದು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ‌. ಇನ್ನೂ ಕಾಯಂ ಮಾಡಿಕೊಂಡಿಲ್ಲ. ವೇತನ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ರೋಸಿ ಹೋಗಿರುವ ನೌಕರ ಮಂಗಳವಾರ ಸಂಜೆಯೇ ಗ್ರಾಪಂ ಕಚೇರಿಗೆ ಮುಳ್ಳಿಮ ಬೇಲಿ ಹಾಕಿದ್ದಾನೆ. ಇಂದು ಅವಧಿಯಾದರೂ ಕಚೇರಿ ಬೀಗ ತೆರೆದಿರಲಿಲ್ಲ.

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಾಪಂ ಇಒ ಚಂದ್ರಶೇಖರ ಕಂದಕೂರು, ಪಿಎಸ್ಐ ಖಾಸಿಂಸಾಬ್ ಭೇಟಿ ನೀಡಿ ತಾತ್ಕಾಲಿಕವಾಗಿ ಸಮಸ್ಯೆ ಪರಿಹರಿಸಿದರು. ಗ್ರಾಮ ಪಂಚಾಯಿತಿ ಗೇಟ್ ಗೆ ಹಾಕಿದ್ದ ಬೀಗ ತೆರೆದರು. ಗುರುವಾರ ಈ ಕುರಿತು ಗ್ರಾಪಂನಲ್ಲಿ ಸಭೆ ಕರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net