ಗ್ರಾಪಂ ಅಭ್ಯರ್ಥಿ ಆತ್ಮಹತ್ಯೆ

IMG-20201225-WA0014.jpg
Published on

ಹಗರಿಬೊಮ್ಮನಹಳ್ಳಿ (ಬಳ್ಳಾರಿ): ತಾಲೂಕಿನ ದಶಮಾಪುರ ಗ್ರಾಪಂ ವ್ಯಾಪ್ತಿಯ ನಾಣ್ಯಪುರ ಗ್ರಾಮದ 40 ವರ್ಷದ ವಿ. ಮಲಿಯಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಲದಲ್ಲಿ ಹುಣಸೆ ಮರಕ್ಕೆ ಗುರುವಾರ ರಾತ್ರಿ ನೇಣು ಹಾಕಿಕೊಂಡಿದ್ದಾರೆ.

ಮಲಿಯಪ್ಪ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದರು. ಮದ್ಯ ವ್ಯಸನಿಯಾಗಿದ್ದ ಮಲಿಯಪ್ಪ ಪತ್ನಿ ಯಲ್ಲಮ್ಮರೊಂದಿಗೆ ಕುಡಿದು ಜಗಳವಾಡಿದ್ದರು ಎಂದು ತಿಳಿದುಬಂದಿದೆ. ಬಳಿಕ ಹೊಲಕ್ಕೆ ತೆರಳಿ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net