ಮುಕ್ರಿ ಸಮಾಜದಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

17gkn1-a-
Published on

ಗೋಕರ್ಣ: ರಸ್ತೆ ಸಂಪರ್ಕ ಕಲ್ಪಿಸದ ಕಾರಣ ಆಕ್ರೋಶಗೊಂಡ ಇಲ್ಲಿನ ಅಶೋಕೆಯ ಗುಡ್ಡಗಾಡು ಪ್ರದೇಶದ ಪರಿಶಿಷ್ಟ ಮುಕ್ರಿ ಸಮಾಜದ ಜನ ಗ್ರಾಪಂ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ತಹಸೀಲ್ದಾರ್​ಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

‘ಅಶೋಕೆಯ ಗುಡ್ಡಗಾಡು ಪ್ರದೇಶದಲ್ಲಿ ಕೂಲಿ ಮಾಡಿಕೊಂಡು ಬದುಕುತ್ತಿದ್ದೇವೆ. ಸಮರ್ಪಕ ರಸ್ತೆ ಇಲ್ಲದ ಕಾರಣ ಹಲವಾರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದೇವೆ. ರಸ್ತೆ ನಿರ್ವಿುಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಸೇರಿದಂತೆ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅಶೋಕೆಯ ಮುಕ್ರಿ ಸಮುದಾಯದ ನಿವಾಸಿಗಳು ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹೊಸಬು ಗಣೇಶ ಮುಕ್ರಿ, ನಾರಾಯಣ ಗಣಪತಿ ಮುಕ್ರಿ, ನಾಗಪ್ಪ ಎಸ್. ಮುಕ್ರಿ, ಗೌರೀಶ ಜಿ. ಮುಕ್ರಿ ಇತರರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು. ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಸಹಾಯಕ ಶಿವಾನಂದ ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net