ಗ್ರಾಪಂ ಚುನಾವಣೆ: ಮೊದಲ ದಿನ 135 ನಾಮಪತ್ರ

Dr. Bagadi Gowtham
????????????????????????????????????
Published on

ಚಿಕ್ಕಮಗಳೂರು: ಈ ತಿಂಗಳ 22ರಂದು ನಡೆಯುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಅಧಿಸೂಚನೆ ಪ್ರಕಟವಾದ ಮೊದಲ ದಿನವಾದ ಸೋಮವಾರ ಜಿಲ್ಲೆಯಲ್ಲಿ ಒಟ್ಟು 135 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಕಡೂರು ತಾಲೂಕಿನಲ್ಲಿ 34, ಮೂಡಿಗೆರೆ ತಾಲೂಕಿನಲ್ಲಿ 33, ಚಿಕ್ಕಮಗಳೂರು ತಾಲೂಕಿನಲ್ಲಿ 32, ತರೀಕೆರೆ ತಾಲೂಕಿನಲ್ಲಿ 18, ಕೊಪ್ಪ ತಾಲೂಕಿನಲ್ಲಿ 15, ಶೃಂಗೇರಿ ತಾಲೂಕಿನಲ್ಲಿ ಇಬ್ಬರು ಹಾಗೂ ಅಜ್ಜಂಪುರ ತಾಲೂಕಿನಲ್ಲಿ ಒಬ್ಬರು ನಾಮಪತ್ರ ಸಲ್ಲಿಸಿದ್ದು ಎನ್.ಆರ್.ಪುರ ತಾಲೂಕಿನಲ್ಲಿ ಮಾತ್ರ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ನಾಮಪತ್ರ ಸಲ್ಲಿಸಿದವರಲ್ಲಿ ಪರಿಶಿಷ್ಟ ಜಾತಿಯ 21, ಪರಿಶಿಷ್ಟ ಪಂಗಡದ 5, ಹಿಂದುಳಿದ ವರ್ಗದಿಂದ ನಾಲ್ವರು, ಹಿಂದುಳಿದ ವರ್ಗ ಬಿ.ಯ ಮೂವರು ಸೇರಿದ್ದು, ಸಾಮಾನ್ಯ ವರ್ಗದಿಂದ 102 ಮಂದಿ ಸೇರಿದ್ದಾರೆ. ಇವರಲ್ಲಿ 101 ಪುರುಷರು ಹಾಗೂ 34 ಮಂದಿ ಮಹಿಳೆಯರಿದ್ದಾರೆ.

ಜಿಲ್ಲಾಧಿಕಾರಿ ಅಧಿಸೂಚನೆ
ಜಿಲ್ಲೆಯಲ್ಲಿ ಡಿ.22 ರಂದು ಒಂದೇ ಹಂತದಲ್ಲಿ ಜಿಲ್ಲೆಯ ಎಂಟು ತಾಲೂಕುಗಳ 226 ಗ್ರಾಪಂಗಳಲ್ಲಿ 209 ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ.ಎಸ್.ಬಗಾದಿ ಗೌತಮ್ ಸೋಮವಾರ ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ.

ಡಿ.11 ನಾಮಪತ್ರ ಸಲ್ಲಿಸಲು ಕೊನೆಯ ದಿನ. 12 ರಂದು ನಾಮಪತ್ರ ಪರಿಶೀಲನೆ, 14 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ.22 ರಂದು ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನ ನಡೆದ ಬಳಿಕ 30 ರಂದು ಬೆಳಗ್ಗೆ 8 ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net