ಹೊನ್ನೇನಹಳ್ಳಿ ಗ್ರಾಪಂಗೆ ವಸಂತಾ ಅಧ್ಯಕ್ಷೆ

honnenahalli new president
ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಆಯ್ಕೆಯಾದ ವಸಂತಾ ವೆಂಕಟೇಶ್ ಅವರನ್ನು ಸೋಮವಾರ ಸದಸ್ಯರು ಸನ್ಮಾನಿಸಿದರು.
Published on

ದಾಬಸ್‌ಪೇಟೆ: ನೆಲಮಂಗಲ ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಕೆ.ಜಿ.ಶ್ರೀನಿವಾಸಪುರದ ವಸಂತಾ ವೆಂಕಟೇಶ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಸಿಡಿಪಿಒ ವಿನೋದ್ ರಾಜ್ ಸೋಮವಾರ ಘೋಷಿಸಿದರು.
ವೀರಸಾಗರದ ಉಮಾದೇವಿ ಹನುಮಂತರಾಯಪ್ಪ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ವಸಂತಾ ವೆಂಕಟೇಶ್ ಆಯ್ಕೆಯಾದರು.
ಉಪಾಧ್ಯಕ್ಷ ಎಚ್.ಟಿ.ರಾಜೇಶ್ ಕುಮಾರ್, ಸದಸ್ಯರಾದ ಉಮಾದೇವಿ ಹನುಮಂತರಾಯಪ್ಪ, ಟಿ.ಉಮೇಶ, ಎಸ್.ಜಿ.ಶಿವನಂದಾ , ಚಿಕ್ಕೇಗೌಡ, ಎಂ.ಚಂದ್ರಶೇಖರ, ಶಿವಕುಮಾರ ನಾಯಕ, ರಂಗಮ್ಮ, ಕೆ.ಎಲ್.ಸುಮಿತ್ರಾ, ಪ್ರೇಮಾ, ಮಂಜುಳಾ, ರೇವಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಮುರಳೀದರ, ತಾಪಂ ಮಾಜಿ ಸದಸ್ಯ ಪುಟ್ಟಗಂಗಯ್ಯ, ಗ್ರಾಪಂ ಮಾಜಿ ಅಧ್ಯಕ್ಷರಾದ ಗಂಗಣ್ಣ, ಜಗದೀಶ್ ಚೌಧರಿ, ಪರಮೇಶಯ್ಯ, ಪಿಡಿಒ ಆರ್.ಮಂಜಮ್ಮ, ಕಾರ್ಯದರ್ಶಿ ಚಂದ್ರಯ್ಯ, ಬಿಲ್ ಕಲೆಕ್ಟರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net