ಕೂಲಿಕಾರರಿಗೆ ಜಾಬ್ ಕಾರ್ಡ್​ ಕೊಡಿ

BADU
Published on

ಯಾದಗಿರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಬದು ನಿರ್ಮಾಣ ಮಾಸಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ವಡಗೇರಾದಲ್ಲಿ ಮಂಗಳವಾರ ಚಾಲನೆ ನೀಡಿದರು.

ಕೂಲಿಕಾರರಿಗೆ ಜಾಬ್ ಕಾರ್ಡ್​ ವಿತರಿಸಿ ಮಾತನಾಡಿದ ಅವರು, ಕಾಮರ್ಿಕರಿಗೆ ದಿನಕ್ಕೆ 275 ರೂ. ಕೂಲಿ ನೀಡಲಾಗುತ್ತದೆ. ಶಹಾಪುರ ತಾಲೂಕಿಗೆ ಮರಳಿದ ವಲಸಿಗರೆಲ್ಲರಿಗೆ ಉದ್ಯೋಗ ಚೀಟಿ ವಿತರಿಸಲು ಹಾಗೂ ಕ್ವಾರಂಟೈನ್ ಕೇಂದ್ರಗಳಿಗೆ ಹೋಗಿ ನಿಗಾದಲ್ಲಿರುವ ಕೂಲಿಕಾರರಿಗೆ ಜಾಬ್ ಕಾರ್ಡ್​ ಕೊಟ್ಟು ಕೆಲಸ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕ್ವಾರಂಟೈನ್ ಕೇಂದ್ರಗಳಲ್ಲಿರುವ ವಲಸಿಗರಿಗೆ ಅಭಿಯಾನ ಮಾದರಿಯಲ್ಲಿ ಜಾಬ್ ಕಾರ್ಡ್​ ವಿತರಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು. ಕೆಲಸದ ವೇಳೆ ಕಾರ್ಮಿಕರು ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಮಾಸ್ಕ್ ಧರಿಸಬೇಕು. ಆಗಾಗ್ಗೆ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳುವಂತೆ ಸಲಹೆ ನೀಡಿದರು.

ನೋಡಲ್ ಅಧಿಕಾರಿ ಮುಕ್ಕಣ್ಣ ಕರಿಗಾರ, ತಾಪಂ ಇಒ ಜಗನ್ನಾಥ ಮೂರ್ತಿ, ಸಹಾಯಕ ನಿದರ್ೇಶಕಿ ಶಾರದಾ, ಗ್ರಾಪಂ ಅಧ್ಯಕ್ಷ ಗೋಪಾಲ ನಾಯಕ್, ಎಡಿಪಿಸಿ ಬನ್ನಪ್ಪ, ಡಿಐಇಸಿ ಪರಶುರಾಮ, ಡಿಐಎಂಎಸ್ ಲಕ್ಷ್ಮೀನಾರಾಯಣ, ಟಿಸಿ ರವೀಂದ್ರ ದೇಸಾಯಿ, ಪಿಡಿಒ ಮಲ್ಲಿಕಾಜರ್ುನ ಸಜ್ಜನ್, ಟಿಎಇ ಶ್ರೀನಿವಾಸ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net