ಮೂಡಿಗೆರೆ, ಕಳಸದಲ್ಲಿ ಪ್ರತ್ಯೇಕ ಆರೋಗ್ಯ ಮೇಳ

web 3
Published on

ಚಿಕ್ಕಮಗಳೂರು: ಮೂಡಿಗೆರೆ ಮತ್ತು ಕಳಸ ಭಾಗಗಳಲ್ಲಿ ಪ್ರತ್ಯೇಕವಾಗಿ ಆರೋಗ್ಯ ಮೇಳ ಆಯೋಜಿಸುವಂತೆ ಜಿಪಂ ಸಿಇಒ ಎಸ್.ಪೂವಿತಾ ಸೂಚಿಸಿದರು.

ಸಿಇಒ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 2019-20ನೇ ಸಾಲಿನ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಬುಡಕಟ್ಟು ಜನಾಂಗದ ಜನಸಂಖ್ಯೆ ಜಾಸ್ತಿ ಇರುವ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಇಲಾಖೆಯ ಕಾರ್ಯಕ್ರಮ, ಯೋಜನೆಗಳು, ಸೇವಾ ಸೌಲಭ್ಯಗಳು ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ, ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಮತ್ತು ಬುಡಕಟ್ಟು ಜನರ ಆರೋಗ್ಯ ಸುಧಾರಣೆಗಾಗಿ ಜಾನಪದ ಬೀದಿ ನಾಟಕ, ತಾಯಂದಿರ ಸಭೆ, ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ, ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಕುರಿತ ಗೋಡೆಬರಹ ಮತ್ತು ಬೃಹತ್ ಆರೋಗ್ಯ ಮೇಳಗಳನ್ನು ಮಾರ್ಚ್ 8 ರಿಂದ ಆಯೋಜಿಸಲು ನಿರ್ಧರಿಸಿದ್ದು, ಕಳಸ ಮತ್ತು ಮೂಡಿಗೆರೆಗಳಲ್ಲಿ ಬೇರೆಲ್ಲ ಕಾರ್ಯಕ್ರಮದಂತೆ ಪ್ರತ್ಯೇಕವಾಗಿ ಆರೋಗ್ಯ ಮೇಳ ಆಯೋಜಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಕೆ.ಪ್ರಭು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಎಚ್.ಅಕ್ಕಮಹಾದೇವಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ್, ಜಿಲ್ಲಾ ಆರೋಗ್ಯ ಪ್ರಭಾರ ಶಿಕ್ಷಣಾಧಿಕಾರಿ ಜಲಜಾಕ್ಷಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net