ಗ್ರಾಪಂ ಉಪ ಚುನಾವಣೆ

CTD 4 DC-06
Published on

ಚಿತ್ರದುರ್ಗ: ರಾಜ್ಯ ಚುನಾವಣಾ ಆಯೋಗ ಜಿಲ್ಲೆಯ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ಫೆ.8ರಿಂದ ಅಧಿಸೂಚನೆ ಹೊರಡಿಸಿದ್ದು, ವೇಳಾಪಟ್ಟಿ ಪ್ರಕಟಿಸಲಾಗಿದೆ.

8ರಿಂದ ಫೆ.28ರವರೆಗೆ ಚುನಾವಣೆ ನಡೆಯುವ ಗ್ರಾಪಂಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. 14-ನಾಮಪತ್ರ ಸಲ್ಲಿಸಲು ಕೊನೆಯ ದಿನ. 15-ನಾಮಪತ್ರಗಳ ಪರಿಶೀಲನೆ. 17-ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅಂತಿಮ ದಿನ. ಫೆ.25ರ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ, ಅಗತ್ಯವಿದ್ದರೆ ಫೆ.27ರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮರು ಮತದಾನ ನಡೆಸಲಾಗುವುದು. 28ರಂದು ಬೆಳಗ್ಗೆ 8ರಿಂದ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

ಚುನಾವಣಾ ನಡೆಯುವ ಗ್ರಾಪಂ ಹಾಗೂ ಸದಸ್ಯ ಸ್ಥಾನಗಳ ವಿವರ: ಚಳ್ಳಕೆರೆ ತಾಲೂಕು ನೆಲಗೇತನಹಟ್ಟಿ ಗ್ರಾಪಂನ ರಾಮದುರ್ಗ-6ನೇ ಕ್ಷೇತ್ರದ ಅನುಸೂಚಿತ ಪಂಗಡದ ಒಂದು ಸದಸ್ಯ ಸ್ಥಾನ. ಚಿತ್ರದುರ್ಗ ತಾಲೂಕಿನ ಕಾಲ್ಗೆರೆ ಗ್ರಾಪಂನ ಗೊಲ್ಲರಹಳ್ಳಿ-9 ಕ್ಷೇತ್ರದ ಅನುಸೂಚಿತ ಪಂಗಡ (ಮಹಿಳೆ) ಒಂದು. ಯಳಗೋಡು ಗ್ರಾಪಂನ ಮ್ಯಾಸರ ಹಟ್ಟಿ-2 ಕ್ಷೇತ್ರದ ಅನುಸೂಚಿತ ಪಂಗಡ ಒಂದು. ಜಂಪಣ್ಣ ನಾಯಕನಕೋಟೆ ಗ್ರಾಪಂ ಜೋಡಿಚಿಕ್ಕೇನಹಳ್ಳಿ-7 ಕ್ಷೇತ್ರದ ಅನುಸೂಚಿತ ಜಾತಿ (ಮಹಿಳೆ) ಒಂದು. ಹೊಳಲ್ಕೆರೆ ತಾಲೂಕು ಹಿರೇಎಮ್ಮಿಗನೂರು ಗ್ರಾಪಂ ವ್ಯಾಪ್ತಿ ಕಡೂರು-3 ಕ್ಷೇತ್ರದ ಅನುಸೂಚಿತ ಕಾತಿ ಒಂದು ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಿಗದಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net