ಗ್ರಾಮ ಪಂಚಾಯಿತಿ ಉಪಚುನಾವಣೆ: ಜು.23ರಂದು ಸಂತೆ, ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ

4
Published on

ಮಂಡ್ಯ: ಜಿಲ್ಲೆಯ ವಿವಿಧೆಡೆ ಗ್ರಾಮ ಪಂಚಾಯಿತಿ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜು.23ರಂದು ಸಂತೆ, ಜಾತ್ರೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಮಳವಳ್ಳಿ ತಾಲೂಕು ನಾಗೇಗೌಡನದೊಡ್ಡಿ, ಕಗ್ಗಲಿಪುರ, ಬೆಳಕವಾಡಿ, ಪಾಂಡವಪುರ ತಾಲೂಕು ಲಕ್ಷ್ಮೀಸಾಗರ, ಶ್ರೀರಂಗಪಟ್ಟಣ ತಾಲೂಕು ಕೊಡಿಯಾಲ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಗ್ರಾಪಂಗಳ ವ್ಯಾಪ್ತಿಯಲಿ ಅಂದು ಸಂತೆ, ಜಾತ್ರೆ ಹಾಗೂ ಉತ್ಸವ ನಿಷೇಧಿಸಲಾಗಿದೆ. ಅಂತೆಯೇ ಅಂದು ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುವುದರಿಂದ ಮತಗಟ್ಟೆ ವ್ಯಾಪ್ತಿಯ 100 ಮೀ ಪ್ರದೇಶದ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ. ಜನರು ಮಾರಾಕಾಸ್ತ ಹಿಡಿದು ತಿರುಗಾಡುವಂತಿಲ್ಲ. ಮೆರವಣಿಗೆ ಸಭೆ-ಸಮಾರಂಭ ಮಾಡುವಂತಿಲ್ಲ. ಪಟಾಕಿ, ಸಿಡಿಮದ್ದು ಮತ್ತು ಇತರೆ ಸ್ಪೋಟಕಗಳನ್ನು ಉಪಯೋಗಿಸುವಂತಿಲ್ಲ, ಬಹಿರಂಗವಾಗಿ ಘೋಷಣೆ ಮಾಡುವುದು, ಪ್ರಚೋದನಾತ್ಮಕ ಮತ್ತು ಉದ್ರೇಕಕಾರಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಪ್ರತಿಕೃತಿ ಅಣುಕು ಪ್ರದರ್ಶನ ಮಾಡುವುದನ್ನು ಪ್ರತಿಬಂಧಿಸಲಾಗಿದೆ.

ಅಂತೆಯೇ ಮತದಾನ ನಡೆಯುವ ಗ್ರಾಮ ಪಂಚಾಯಿತಿ ಹಾಗೂ ಮತ ಕ್ಷೇತ್ರದ 5 ಕಿ.ಮೀ ಸುತ್ತಳತೆ ವ್ಯಾಪ್ತಿಯಲ್ಲಿ ಜು.21ರ ಸಂಜೆ 5 ಗಂಟೆಯಿಂದ 23ರ ಸಂಜೆ 5 ಗಂಟೆವರೆಗೆ ಎಲ್ಲ ತರಹದ ಮದ್ಯದಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.

------------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net