`ಗೌಡ ಮೆಚ್ಚಿದ ಹುಡುಗಿ' ನಾಟಕ ಪ್ರದರ್ಶನ 22ರಂದು

19 Dwd 4 Prabhu Hanchinal
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕಲಾ ಸಂಗಮ ಸಂಸ್ಥೆ ವತಿಯಿಂದ ಡಿ. 22ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ `ಗೌಡ ಮೆಚ್ಚಿದ ಹುಡುಗಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಹಿರಿಯ ಕಲಾವಿದ ಪ್ರಭು ಹಂಚಿನಾಳ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃತ್ತ ರಂಗಭೂಮಿ ಕಲಾವಿದ ಶ್ಯಾಮ ದೇಶಮುಖ ಸಹಾಯಾರ್ಥ ಅಂದು ಮಧ್ಯಾಹ್ನ 3 ಮತ್ತು 6 ಗಂಟೆಗೆ 2 ಪ್ರದರ್ಶನ ನಡೆಯಲಿವೆ. ನವದೆಹಲಿಯ ಎ.ಐ.ಪಿ.ಟಿ.ಎ ಅಧ್ಯಕ್ಷ ಬಸವರಾಜ ಗುರಿಕಾರ ನಾಟಕಕ್ಕೆ ಚಾಲನೆ ನೀಡುವರು. ರಂಗಭೂಮಿ ಹಿರಿಯ ನಟ ಡಾ. ರಾಜು ತಾಳಿಕೋಟಿ ಹಾಗೂ ಪ್ರೇಮಾ ತಾಳಿಕೋಟಿ ಮುಖ್ಯ ಪಾತ್ರದಲ್ಲಿ ಅಭಿಯಯಿಸಲಿದ್ದಾರೆ ಎಂದರು.

ರಾಜೀವಸಿ0ಗ್ ಹಲವಾಯಿ, ಶ್ಯಾಮ ದೇಶಮುಖ, ರಮೇಶ ಹಿರೇರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net