ಮೇ ೧೮ರಿಂದ ಗೌಡ ಫುಟ್ಬಾಲ್ ಟ್ರೋಫಿ

Gowda Football Trophy from May 18
Published on

ಮಡಿಕೇರಿ:

ಗೌಡ ಫುಟ್‌ಬಾಲ್ ಅಕಾಡೆಮಿ ವತಿಯಿಂದ ಆಯೋಜಿಸಲಾಗುತ್ತಿರುವ ಗೌಡ ಫುಟ್ಬಾಲ್ ಟ್ರೋಫಿ ೭ನೇ ವರ್ಷದ ಪಂದ್ಯಾವಳಿ ಮುಂದಿನ ತಿಂಗಳು ೧೮ರಿಂದ ೨೫ರ ತನಕ ನಡೆಯಲಿದೆ ಎಂದು ಅಕಾಡೆಮಿ ಕಾರ್ಯದರ್ಶಿ ನವನೀತ್ ಇಟ್ಟಣಿಕೆ ತಿಳಿಸಿದ್ದಾರೆ. ಕೊಡಗಿನ ಗೌಡ ಕುಟುಂಬಗಳ ಮಧ್ಯೆ ನಡೆಯುವ ಈ ಪಂದ್ಯಾವಳಿಯಲ್ಲಿ ಕಳೆದ ವರ್ಷ ೯೮ ತಂಡಗಳು ಪಾಲ್ಗೊಂಡಿದ್ದವು. ಈ ವರ್ಷ ಮೊದಲು ನೋಂದಾಯಿಸಿಕೊಂಡ ೬೪ ತಂಡಗಳಿಗೆ ಮಾತ್ರ ಅವಕಾಶ ಕೊಡಲಾಗುವುದು. ಪ್ರಥಮ ಬಹುಮಾನ ೭೦ ಸಾವಿರ ರೂ. ನಗದು ಕೊಡಲಾಗುವುದು. ದ್ವಿತೀಯ, ತೃತೀಯ ಹಾಗೂ ವ್ಯಯಕ್ತಿಕ ಬಹುಮಾನಗಳೂ ಇವೆ. ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದೇ ಸಂದರ್ಭ ಗ್ರಾಮಗಳ ಬಗ್ಗೆ ಯೂನಿಟಿ ಕಪ್ ಫುಟ್ಬಾಲ್ ಕೂಡ ಆಯೋಜಿಸಲಾಗಿದೆ. ಗುರುವಾರದಿಂದ (ಏ.೧೧) ನೋಂದಣಿ ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೦೦೮೫೩೯೯೨ ಸಂಪರ್ಕಿಸಬಹುದಾಗಿದೆ. ಮೇ. ೫ರ ತನಕ ನೋಂದಣಿಗೆ ಅವಕಾಶ ಇದೆ. ಮೇ.೧೦ಕ್ಕೆ ಟೈಸ್ ಹಾಕಲಾಗುವುದು ಎಂದರು.

ಅಧ್ಯಕ್ಷ ಬಡುವಂಡ್ರ ಸುಜಯ್, ಉಪಾಧ್ಯಕ್ಷ ಪಾಂಡನ ಋಷಿಕೇಶ್, ಸಹಕಾರ್ಯದರ್ಶಿ ಜೈನೀರ ರೋಷನ್, ಖಜಾಂಚಿ ಕೊಂಪಳೀರ ಪುನೀತ್ ಹಾಗೂ ಸಹ ಖಜಾಂಚಿ ರೋಷನ್ ಬೊಳ್ಳೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net