ಗೌಡ ಫೂಟ್ಬಾಲ್: ೩ ತಂಡಗಳು ಕ್ವಾರ್ಟರ್ ಫೈನಲ್‌ಗೆ

5adarshkdga1
Published on

ಮಡಿಕೇರಿ: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಬಿಳಿಯಂಡ್ರ, ಚೆಟ್ಟಿಮಾಡ, ಕೊಳಂಬೆ ತಂಡಗಳು ಫ್ರೀ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಿತು.


ಶುಕ್ರವಾರದ ಮೊದಲ ಪಂದ್ಯದಲ್ಲಿ ಬೊಳ್ತಜ್ಜಿರ ಮತ್ತು ಬಿಳಿಯಂಡ್ರ ತಂಡಗಳ ನಡುವೆ ನಡೆಯಿತು. ಇತ್ತಂಡಗಳು ೩-೩ ಗೋಲುಗಳ ಸಮಬಲ ಸಾಧಿಸಿತು. ನಂತರ ಪೆನಾಲ್ಟಿ ಶೋಟೌಟ್‌ನಲ್ಲಿ ಬಿಳಿಯಂಡ್ರ ತಂಡ ೫-೪ ಗೋಲುಗಳಿಂದ ಗೆಲುವು ಸಾಧಿಸಿತು. ಮತ್ತೊಂದ ಪಂದ್ಯದಲ್ಲಿ ಚೆಟ್ಟಿಮಾಡ ತಂಡ ೩-೦ ಗೋಲುಗಳಿಂದ ಮಂಞಂಡ್ರ ತಂಡವನ್ನು ಸೋಲಿಸಿತು.


ಕೊಳಂಬೆ ಮತ್ತು ನಂಗಾರು ತಂಡಗಳ ನಡುವಿನ ಪಂದ್ಯದಲ್ಲಿ ಕೊಳಂಬೆ ತಂಡ ೧-೦ ಗೋಲುಗಳಿಂದ ನಂಗಾರು ತಂಡವನ್ನು ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಬೊಳ್ಳೂರು ತಂಡವನ್ನು ಪೊಕ್ಕೂಳಂಡ್ರ ತಂಡ ೩-೦ ಗೋಳುಗಳಿಂದ ಸೋಲಿಸಿತು.


ಉಳುವಾರನ ತಂಡವನ್ನು ಬಿಳಿಯಂಡ್ರ ತಂಡ ೩-೨ ಗೋಲುಗಳಿಂದ ಮಣಿಸಿತು. ಕೋಳಿಮಾಡು ಮತ್ತು ಕೊಳಂಬೆ ತಂಡಗಳ ನಡುವಿನ ಪಂದ್ಯದಲ್ಲಿ ೬-೦ ಗೋಲುಗಳಿಂದ ಕೊಳಂಬೆ ತಂಡ ಜಯಶಾಲಿಯಾಯಿತು. ತಂಡದ ಪರ ಮಧು ೩, ಕವನ್, ಮಿಥುನ್, ಗಿರೀಶ್ ತಲಾ ಒಂದೊಂದು ಗೋಲು ದಾಖಲಿಸಿದರು.


ಶುಕ್ರವಾರ ನಡೆದ ಪಂದ್ಯದಲ್ಲಿ ಬಿಳಿಯಂಡ್ರ, ಚೆಟ್ಟಿಮಾಡ, ಕೊಳಂಬೆ ತಂಡಗಳು ಫ್ರೀ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಿತು. ಪೊಕ್ಕೂಳಂಡ್ರ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net