ಗೌಡ ಕುಟುಂಬಗಳ ಪಾಣತ್ತಲೆ ಫುಟ್ಬಾಲ್ ಕಪ್‌ಗೆ ಚಾಲನೆ

23adarshkdga3
Published on

ಮಡಿಕೇರಿ: ಹತ್ತು ಕುಟುಂಬ ಹದಿನೆಂಟು ಗೋತ್ರದ ಅರೆಭಾಷಿಕ ಗೌಡ ಕುಟುಂಬಗಳ ನಡುವಿನ ೨ನೇ ವರ್ಷದ ಪಾಣತ್ತಲೆ ಫುಟ್‌ಬಾಲ್ ಕಪ್‌ಗೆ ಚಾಲನೆ ನೀಡಲಾಯಿತು.


ಮರಗೋಡುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾಟಕ್ಕೆ ಅಂತರರಾಷ್ಟ್ರೀಯ ಮ್ಯಾರಥಾನ್ ಓಟಗಾರ ಹೊಸೊಕ್ಲು ಚಿಣ್ಣಪ್ಪ ಚಾಲನೆ ನೀಡಿದರೆ, ಸಭಾ ಕಾರ್ಯಕ್ರಮವನ್ನು ಬಿಎಸ್‌ಎನ್‌ಎಲ್ ನಿವೃತ್ತ ಇಂಜಿನಿಯರ್ ಪಾಣತ್ತಲೆ ಪೊನ್ನಪ್ಪ ಉದ್ಘಾಟಿಸಿದರು.


ಪಾಣತ್ತಲೆ ಕ್ರೀಡಾ ಸಮಿತಿ ಅಧ್ಯಕ್ಷ ಪಾಣತ್ತಲೆ ಜಗದೀಶ್ ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮರಗೋಡು ಗ್ರಾ.ಪಂ. ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮ, ಮರಗೋಡು ಸರಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕೆಂದಂಬಾಡಿ ಶೈಲಾ, ಕಾಫಿ ಬೆಳೆಗಾರ ಪಾಣತ್ತಲೆ ನಂಜಪ್ಪ, ಪಾಣತ್ತಲೆ ದೇವಯ್ಯ, ಚರಂಡೇಟಿ ಅಯ್ಯಪ್ಪ ಸಂಘದ ಉಪಾಧ್ಯಕ್ಷ ಪಾಣತ್ತಲೆ ಸತ್ಯ ವಿಶ್ವನಾಥ್, ಕಟ್ಟೆಮಾಡು ಮೀನಾ ರಾಮಚಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.


ಕಟ್ಟೆಮನೆ ಸೋನಾಜಿತ್, ಪಾಣತ್ತಲೆ ರಾಯ್ ಚಿಣ್ಣಪ್ಪ, ಪ್ರಮೀಳಾ ಪೊನ್ನಪ್ಪ, ಪರಿಚನ ಸತೀಶ್ ಇದ್ದರು. ಸೋನಾಜಿತ್ ವೀಕ್ಷಕ ವಿವರಣೆ ನೀಡಿದರು. ದಿನದ ಮೊದಲ ಪಂದ್ಯದಲ್ಲಿ ಮುಕ್ಕಾಟಿ, ಚಂಡಿರ, ಕೊಳಂಬೆ ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್‌ಗೆ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡರೆ, ಮಂಞಂಡ್ರ ಮುಂದಿನ ಹಂತಕ್ಕೆ ಪ್ರವೇಶಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net