ಮದುವೆಯಲ್ಲಿ ಗೋವು ಪ್ರದರ್ಶನ

Govu 01
Published on

ಕಲಬುರಗಿ: ನಗರದ ಹೊರವಲಯದ ನಿಗ್ಗುಡಗಿ ಕಲ್ಯಾಣ ಮಂಟಪದಲ್ಲಿ ಡಿ.೫ರಂದು ನಡೆದ ಕುಲ್ಕರ್ಣಿ ಪರಿವಾರದ ಮದುವೆ ಸಮಾರಂಭದಲ್ಲಿ ದೇಶಿ ತಳಿಯ ಗೋವುಗಳ ಪ್ರದರ್ಶನ ಏರ್ಪಡಿಸಿದ್ದು, ಗಮನ ಸೆಳೆಯಿತು.

ರಾಷ್ಟಿçÃಯ ಯುವ ಸಂತ ರಾಜೀವ್ ದಿಕ್ಷಿತ್ ಅಭಿಯಾನಿ, ಸ್ವದೇಶಿ ಕಾರ್ಯಕರ್ತ ಅಕ್ಷಯ ಕುಲ್ಕರ್ಣಿ ಮತ್ತು ಮೇನಕಾ ಅವರ ಮದುವೆ ಡಿ.೫ರಂದು ನಡೆದಿದ್ದು, ಮದುವೆ ಮಂಟಪದ ಎದುರು ದೇಸಿ ತಳಿಯ ಗೋವುಗಳಾದ ದೇವಣಿ, ಹಳ್ಳಿಕಾರ, ಲಾಲ್ ಕಂದಾರ, ಪುಂಗನೂರ, ಓಂಗೋಲ್, ಜವಾರಿ ಸೇರಿ ಸ್ಥಳೀಯ ಗೋವುಗಳ ಪ್ರದರ್ಶನ ಮಾಡಲಾಯಿತು. ಬೆಳಗ್ಗೆ ನೂತನ ವಧು ವರರು ಗೋ ಪೂಜೆ ಸಲ್ಲಿಸಿ, ಗೋ ಗ್ರಾಸ ಅರ್ಪಿಸಿ ಮದುವೆಗೆ ಹೆಜ್ಜೆ ಇಟ್ಟರು. ಪ್ರದರ್ಶನದಲ್ಲಿದ್ದ ಗೋವುಗಳ ಕುರಿತು ಗೋಪಾಲಕರು ಮದುವೆಗೆ ಬಂದ ಅತಿಥಿಗಳು, ಬೀಗರು, ಆತ್ಮೀಯತರಿಗೆ ಮಾಹಿತಿ ನೀಡಿದರು.

ವರ ಅಕ್ಷಯ ಕುಲ್ಕರ್ಣಿ ನಗರದಲ್ಲಿ ಬೃಹತ್ ಸ್ವದೇಶಿ ಮಳಿಗೆಯ ಪಾಲುದಾರರಾಗಿದ್ದು, ನಿತ್ಯ ಜೀವನದಲ್ಲಿ ಸ್ವದೇಶಿ ಚಿಂತನೆಗಳನ್ನು ಅಳವಡಿಸಿಕೊಂಡಿದ್ದು, ಅದನ್ನು ಪಸರಿಸುವ ಉz್ದೆÃಶದೊಂದಿಗೆ ಮದುವೆ ಮನೆಯಲ್ಲಿ ಗೋ ಪ್ರದರ್ಶನ ಏರ್ಪಡಿಸಿದ್ದು, ಗಮನ ಸೆಳೆಯಿತು.

ಸೆಲ್ಫಿ ತಾಣ: ಮದುವೆ ಮನೆಯಲ್ಲಿ ಬೀಗರು, ಮದುಮಕ್ಕಳ ಜತೆ ಸೆಲ್ಫಿ ತೆಗೆದುಕೊಳ್ಳುವುದು ಸಹಜ. ಆದರೆ ಈ ಮದುವೆಯಲ್ಲಿ ಏರ್ಪಡಿಸಿದ್ದ ಗೋವುಗಳ ಪ್ರದರ್ಶನದಲ್ಲಿ ವಿವಿಧ ತಳಿಯ ಗೋವುಗಳ ಜತೆ ಸೆಲ್ಫಿ ತೆಗೆದುಕೊಂಡು, ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಗೋವುಗಳಿಗೆ ನಮಿಸಿ, ಅವುಗಳ ಕೈಯಾಡಿಸಿ ಸಂಭ್ರಮಿಸಿದರು.

ಗೋವು ಇರುವ ಮನೆ ಸದಾ ಅಕ್ಷಯವಾಗಿರುತ್ತದೆ ಎಂಬುದು ವಾಸ್ತವ. ಅದು ಹಲವು ಬಾರಿ ಸಾಬೀತಾಗಿದೆ. ಪ್ರಸ್ತುತ ಗೋವುಗಳನ್ನು ದೂರಾಗುತ್ತಿದ್ದು, ಅವುಗಳ ಮಹತ್ವ ತಿಳಿಸುವ, ತಳಿಗಳನ್ನು ಅರುಹುವ ಕುರಿತು ಜಾಗೃತಿ ಮೂಡಿಸಲು ಪ್ರದರ್ಶನ ಏರ್ಪಡಿಸಲಾಗಿದೆ. ಸ್ವದೇಶಿ ಚಳುವಳಿಗೆ ಗೋಮಾತೆಯ ಬಹುದೊಡ್ಡ ಶಕ್ತಿಯಾಗಿದ್ದಾಳೆ.

| ಅಕ್ಷಯ ಕುಲ್ಕರ್ಣಿ, ಸ್ವದೇಶಿ ಕಾರ್ಯಕರ್ತ

ಮದುಮಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net