ಅಪಘಾತದಲ್ಲಿ ಮೃತ ಪೇದೆಗೆ ಸರ್ಕಾರಿ ಗೌರವ ವಂದನೆ

web 77
Published on

ಧಾರವಾಡ: ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ಗರಗ ಠಾಣೆಯ ಪೇದೆ ಹುಚ್ಚೇಶ ಮಲ್ಲೆನ್ನವರ ಪಾರ್ಥಿವ ಶರೀರಕ್ಕೆ ಜಿಲ್ಲಾ ಪೊಲೀಸ್ ವತಿಯಿಂದ ಶುಕ್ರವಾರ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು.
ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸ್ ಹೆಡ್‌ಕ್ವಾಟರ್ ಮೈದಾನದಲ್ಲಿ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು. ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಪೊಲೀಸ್ ಅಽಕಾರಿಗಳು, ಸಿಬ್ಬಂದಿ ಹಾಗೂ ಹುಚ್ಚೇಶ ಸಂಬ೦ಧಿಕರು ಉಪಸ್ಥಿತರಿದ್ದರು. ಗೌರವ ವಂದನೆ ಸಲ್ಲಿಸಿದ ಬಳಿಕ ಸಂಬ೦ಧಿಕರಿಗೆ ಮೃತದೇಹ ಹಸ್ತಾಂತರಿಸಲಾಯಿತು.
ಹುಚ್ಚೇಶ ಹನುಮಂತ ಇಂಜನವಾರೆ (29) ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜನವಾರೆ ಗ್ರಾಮದವರು. ಗರಗ ಪೊಲೀಸ್ ಠಾಣೆಯಲ್ಲಿ ನಾಗರಿಕ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೆ. 20ರಂದು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಗಣೇಶೋತ್ಸವ ಬಂದೋಬಸ್ತ್ಗೆ ತೆರಳಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಗರಗಕ್ಕೆ ಮರಳುತ್ತಿದ್ದ ವೇಳೆ ಹು-ಧಾ ಬೈಪಾಸ್‌ನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು. ಹಿಂದೆ ಕುಳಿತಿದ್ದ ಅದೇ ಠಾಣೆ ಮಹಿಳಾ ಪೇದೆ ಲಕ್ಷ್ಮೀ ಅರಬಾವಿ ಎಂಬುವರಿಗೆ ತೀವ್ರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net