

ಬೆಂಗಳೂರು: ಶಿಕ್ಷಕರು ತಮ್ಮ ಸೇವಾ ಮಾಹಿತಿಯನ್ನು ಪರಿಶೀಲಿಸಿ ಶಿಕ್ಷಕರ ಮಿತ್ರ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುವಂತೆ ಶಿಕ್ಷಣ ಇಲಾಖೆಯು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಮಾಹಿತಿಯನ್ನು 2017ರಿಂದ ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ (ಟಿಡಿಎಸ್) ದಲ್ಲಿ ಅಳವಡಿಸಲಾಗಿತ್ತು. ಇದೀಗ ಟಿಡಿಎಸ್‌ನಲ್ಲಿ ಅಳವಡಿಸಿರುವ ಮಾಹಿತಿಯನ್ನು ಶಿಕ್ಷಕ ಮಿತ್ರ ತಂತ್ರಾಂಶಕ್ಕೆ ವರ್ಗಾಯಿಸಲಾಗಿದೆ. ಕಚೇರಿಯ ಎಲ್ಲ ಡಿಡಿಓಗಳು ಮತ್ತು ಲಾಗಿನ್ ಆಗಿ ಉದ್ಯೋಗಿ ಮಾಹಿತಿ ತಿದ್ದುಪಡಿ ಕ್ಲಿಕ್ ಮಾಡಿ ತಮ್ಮ ಅಧೀನ ಶಾಲೆ, ಕಚೇರಿಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಶಿಕ್ಷಕರ ಮಾಹಿತಿ ಪರಿಶೀಲಿಸಬೇಕು. ಪ್ರತಿ ಶಿಕ್ಷಕ ಮಾಹಿತಿ ತೆರೆದು, ಹೆಸರು, ಕೆಜಿಐಡಿ ಸಂಖ್ಯೆ, ಜನ್ಮ ದಿನಾಂಕ ಸೇರಿದಂತೆ ಎಲ್ಲ ಮಾಹಿತಿಯನ್ನು ಪರಿಶೀಲಿಸಬೇಕು. ಆನಂತರ ಅದನ್ನು ಅಪ್‌ಡೇಟ್ ಮಾಡಬೇಕು.
ಬಹಳ ಮುಖ್ಯವಾಗಿ ಮೂಲ ಮಾಹಿತಿ, ಕರ್ತವ್ಯ ನಿರತ ಮಾಹಿತಿ, ಆದ್ಯತೆ, ವಿದ್ಯಾರ್ಹತೆ, ಇಲಾಖಾ ಪರೀಕ್ಷೆ, ಸೇವಾ ಮಾಹಿತಿ, ವರ್ಗಾವಣೆ ಈ ಎಲ್ಲ ಮಾಹಿತಿಗಳನ್ನು ಈಗಾಗಲೇ ತಿಳಿಸಿರುವಂತೆ ಅನುಸರಿಸಿ ಎಲ್ಲ ಶಿಕ್ಷಕರ ಮಾಹಿತಿಯನ್ನು ಅ.2ರೊಳಗೆ ಅಪ್‌ಡೇಟ್ ಮಾಡುವಂತೆ ಶಿಕ್ಷಣ ಇಲಾಖೆಯ ವರ್ಗಾವಣಾ ಕೋಶದ ನಿರ್ದೇಶಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.