ಕೇರಳ ಮಾದರಿಯಲ್ಲಿ ಪ್ರಸ್ತಾವನೆ ಕಳುಹಿಸಿದ್ದರೆ ಬಾಧಕವಿರಲಿಲ್ಲ: ಜೀವರಾಜ್

Jeevaraj
Published on

ಚಿಕ್ಕಮಗಳೂರು: ಕೇಂದ್ರ ಸರ್ಕಾರ 2013ರಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯದ ಅಭಿಪ್ರಾಯ ಕೇಳಿದಾಗಲೇ ಕೇರಳ ಮಾದರಿಯಲ್ಲಿ ಗ್ರಾಮ ಸಮಿತಿಗಳ ತೀರ್ಮಾನದ ಪ್ರಕಾರ ಪ್ರಸ್ತಾವನೆ ಕಳುಹಿಸಿದ್ದರೆ ಈಗಿನ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.

ನಗರದ ನಗರದ ಆಜಾದ್ ಪಾರ್ಕ್ ಮೈದಾನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 2014ರ ಮಾ.10ರಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅಭಿಪ್ರಾಯ ಬಯಸಿದಾಗ ರಾಜ್ಯ ಸರ್ಕಾರ ಒಪ್ಪಿಗೆ ಇದೆ ಎಂದು ಹೇಳಿದ ಬಳಿಕ ಅದು ಅಧಿಸೂಚನೆಯಾಯಿತು. ಅಂದಿನ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನ ಆಯಿತು. ಈ ಲೋಪದ ಬಗ್ಗೆ ಗಮನ ಸೆಳೆದಿದ್ದೆ ಎಂದರು.

ಶೇ.60ರಷ್ಟು ನ್ಯಾಯ ದೊರಕೀತು

ಈಗಿನ ಮುಖ್ಯಮಂತ್ರಿಗಳು ಅ.23ರಂದು ಕೇಂದ್ರಕ್ಕೆ ಪತ್ರ ಬರೆದಿದ್ದು ಈ ತಿಂಗಳ 2 ರಂದು ಕೇಂದ್ರದಿಂದ ರಾಜ್ಯಕ್ಕೆ ಪರಿಷ್ಕøತ ಪತ್ರ ಕಳುಹಿಸುವಂತೆ ಸೂಚನೆ ಬಂದಿದೆ. ಇದೀಗ ಪರಿಷ್ಕøತ ಮಾಹಿತಿ ಕಳುಹಿಸಿದರೂ ಸುಪ್ರೀಂ ಕೋರ್ಟ್ ಒಪ್ಪಬೇಕಾಗುತ್ತದೆ. ಈಗ ನಮ್ಮ ಹೋರಾಟ ಬಲಗೊಂಡರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಪರಿಸರ ಸಚಿವರು ನಮ್ಮ ಪರವಾಗಿ ನಿಲ್ಲುತ್ತಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದರೆ ಶೇ.60 ರಷ್ಟಾದರೂ ನ್ಯಾಯ ಪಡೆದುಕೊಳ್ಳಲು ಸಾಧ್ಯವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net