ಸರ್ಕಾರಿ ಸೌಲಭ್ಯಗಳ ಸದ್ಬಳಕೆಗೆ ಸಲಹೆ

VITARANE
ಮಾಡಗಿರಿ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಶಾಸಕ ಜಿ.ಹಂಪಯ್ಯ ನಾಯಕ ಶೂ-ಸಾಕ್ಸ್ ವಿತರಣೆ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಅಡಿವೇಂದ್ರ, ಮುಖಂಡರಾದ ಜಯವಂತ ಬಸವರಾಜ್ ನಾಯಕ, ವೆಂಕಯ್ಯ ನಾಯ್ಡು, ಬಸವರಾಜಪ್ಪಗೌಡ, ಬಸಯ್ಯಸ್ವಾಮಿ ಹಿರೇಮಠ ಇದ್ದರು.
Published on

ಸಿರವಾರ: ತಾಲೂಕಿನ ಮಾಡಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ ಮಂಗಳವಾರ ಶೂ-ಸಾಕ್ಸ್ ವಿತರಿಸಿ ಮಾತನಾಡಿದರು.

ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಬಾರದೆಂಬ ಉದ್ದೇಶದಿಂದ ಸರ್ಕಾರ ಬಿಸಿಯೂಟ, ಹಾಲು, ಮೊಟ್ಟೆ, ಸಮವಸ್ತ್ರ, ಶ್ಯೂ, ಸಾಕ್ಸ್ ನೀಡುತ್ತಿದೆ. ಇವುಗಳ ಸದುಪಯೋಗದೊಂದಿಗೆ ಉತ್ತಮ ಶಿಕ್ಷಣ ಪಡೆದು ಶಾಲೆ, ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಅಡಿವೇಂದ್ರ, ಮುಖಂಡರಾದ ಜಯವಂತ ಬಸವರಾಜ್ ನಾಯಕ, ವೆಂಕಯ್ಯ ನಾಯ್ಡು, ಬಸವರಾಜಪ್ಪಗೌಡ, ಬಸಯ್ಯಸ್ವಾಮಿ ಹಿರೇಮಠ, ಕೆ. ಶರಣಪ್ಪ ಚಿನ್ನಪ್ಪ, ಲವಕುಮಾರ, ಸಾಬುಗೌಡ ನಾಯಕ, ಶಿವಪ್ಪಗೌಡ, ದೇವರಾಜಪ್ಪ ಗೌಡ, ರವಿಕುಮಾರ, ವೆಂಕಟೇಶ, ಗರೀಬ್ ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net