ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಸೌಲಭ್ಯ

8 kudlagi 01
ಕೂಡ್ಲಿಗಿ ತಾಲೂಕಿನ ಹಾಲಸಾಗರ-ಕೆ.ರಾಯಪುರ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಗುಡೇಕೋಟೆ ಗ್ರಾಪಂ ಅಧ್ಯಕ್ಷ ಕೆ.ಕೃಷ್ಣ, ದಿನ್ನೆ ಮಲ್ಲಿಕಾರ್ಜುನ, ರಾಯಪುರ ಕೃಷ್ಣಪ್ಪ, ಹುಲಿರಾಜು, ದಳಪತಿ ರಾಜು, ಕೆರಕಪ್ಪರ ಬೊಮ್ಮಣ್ಣ, ಮೇಕೆ ಗೋವಿಂದ ಇದ್ದರು.
Published on

ಕೂಡ್ಲಿಗಿ: ತ್ರದ ಗ್ರಾಮೀಣ ರಸ್ತೆಗಳ ಸುಧಾರಣೆ ಹಾಗೂ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಳಕೆ ಮಾಡಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಕ್ಷೇತ್ರದ ವಿವಿಧ ಗ್ರಾಮಗಳಲ್ಲಿನ ರಸ್ತೆಗಳಿಗೆ ಭೂಮಿ ಪೂಜೆ ನೆರವೇರಿಸಿ ಮಂಗಳವಾರ ಮಾತನಾಡಿದರು. ಗ್ರಾಮೀಣ ಜನತೆಯ ಬದುಕು ಹಸನಾಗಲು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಗಡಿ ಗ್ರಾಮಗಳ ರಸ್ತೆ ಸುಧಾರಣೆಗಾಗಿ ಸುಮಾರು 8 ಕೋಟಿ ರೂ. ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.

ಗಡಿ ಗ್ರಾಮಗಳಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಸುಮಾರು ವಷರ್ಗಳಿಂದ ರಸ್ತೆಗಳಲ್ಲಿನ ತಗ್ಗು-ಗುಂಡಿಗಳಿಂದ ಜನರಿಗೆ ಓಡಾಡುವುದೇ ದುಸ್ತರವಾಗಿತ್ತು. ಇದನ್ನು ಅರಿತು ರಸ್ತೆ ಮಾರ್ಗಗಳ ಸುಧಾರಣೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಎಸ್ಸಿ-ಎಸ್ಟಿ ಕಾಲನಿಗಳಲ್ಲಿ ಸಂಪೂರ್ಣವಾಗಿ ಸಿಸಿ ರಸ್ತೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ವಸತಿ, ಕುಡಿಯಲು ಶುದ್ಧ ನೀರು ಸೇರಿದಂತೆ ಬೀದಿದೀಪ ಹಾಗೂ ಸ್ವಚ್ಛತೆಗೆ ಒತ್ತು ನೀಡಲಾಗಿದೆ. ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸಿದ್ದು, ಅವಶ್ಯ ಇದ್ದ ಕಡೆ ವಸತಿ ನಿಲಯಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯ ಸಮಸ್ಯೆಗಳನ್ನು ಪಟ್ಟಿಮಾಡಿ ಗ್ರಾಮೀಣರ ಆರೋಗ್ಯ ಕಾಪಾಡಲು ವೈದ್ಯರು ಸೇರಿದಂತೆ ಆಂಬ್ಯುಲೆನ್ಸ್ ಸೇವೆ ಒದಗಿಸಿ ಗ್ರಾಮೀಣರ ಬದುಕನ್ನು ಹಸನಾಗಿಸಲು ಎಲ್ಲ ಪ್ರಯತ್ನ ಮಾಡಿರುವುದಾಗಿ ಶಾಸಕ ತಿಳಿಸಿದರು.

ಪ್ರಮುಖರಾದ ಎನ್.ಪಿ.ಮಂಜುನಾಥ, ಕೆ.ಇ.ಬಿ.ಗೋವಿಂದ, ತೋತ್ಯಾ ತಿಪ್ಪೇಸ್ವಾಮಿ, ಹಾಲಸಾಗರ ಮಂಜಣ್ಣ, ಎ.ಜಿ.ಪ್ರಭಾಕರ್ ಗೌಡ, ದಿನ್ನೆ ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net