ಸರ್ಕಾರಿ ಶಾಲೆ ಪ್ರತಿಭಾವಂತರ ಕೇಂದ್ರ

6BLH4
Published on

ಬೈಲಹೊಂಗಲ: ಸರ್ಕಾರಿ ಶಾಲೆಗಳು ಪ್ರತಿಭಾವಂತರನ್ನು ರೂಪಿಸುವ ಕೇಂದ್ರಗಳಾಗಿವೆ ಎಂದು ಬಿಇಒ ಎ.ಎನ್.ಪ್ಯಾಟಿ ಹೇಳಿದರು.

ಪಟ್ಟಣದ ಶಾಸಕರ ಮತಕ್ಷೇತ್ರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ. 4ರಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, 8ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಮುಖ್ಯೋಪಾಧ್ಯಾಯ ಸಿ.ಬಿ.ಶೀಗಿಹಳ್ಳಿ ಅವರ ನಿವೃತ್ತ ಸಮಾರಂಭ ಉದ್ಘಾಟಿ ಮಾತನಾಡಿದರು.

ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ಕಲಾದಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಅರ್ಜುನ ಕಲಕುಟಕರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಸಿ.ಬಿ.ಶೀಗಿಹಳ್ಳಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲೆಗೆ ದೇಣಿಗೆ ನೀಡಿದ ಮಹಣೀಯರನ್ನು ಸತ್ಕರಿಸಲಾಯಿತು. ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಪುರಸಭೆ ಸ್ಥಾಯಿ ಸಮಿತಿ ಸದಸ್ಯೆ ಹೇಮಲತಾ ಹಿರೇಮಠ, ಸದಸ್ಯೆ ಶ್ರೀದೇವಿ ದೇವಲಾಪೂರ, ಗಂಗಮ್ಮ ಸಾಲಿ, ಸಿಆರ್‌ಪಿ ಎಸ್.ಐ.ಜನ್ಮಟ್ಟಿ, ಬಿ.ಆರ್.ಸಿ ರಾಜು ಹಕ್ಕಿ, ಸಿ.ಎಸ್.ಭಜಂತ್ರಿ, ಪರಶುರಾಮ ಸೊಂಟಕ್ಕಿ, ವಿವೇಕ ಗಾಣಗಿ,

ಎಸ್.ಜಿ.ಹೊರಟ್ಟಿ, ಗದಿಗೆಪ್ಪ ಮಡಿವಾಳರ, ಮಹಾಂತೇಶ ರಾಜಗೋಳಿ, ನಾಗರಾಜ ಸಾಲಿಮಠ, ಪೂಜಾ ಕೊಟಬಾಗಿ, ರಾಮನಿಂಗ ಗೋಣಿ, ಪವಿತ್ರಾ ತಲ್ಲೂರ, ಭಾರತಿ ಬಾದಾಮಿ, ದೈಹಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ಐ.ಮಿರ್ಜಣ್ಣವರ ಇದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಡಿ.ಎನ್.ಹಲಕಿ ಸ್ವಾಗತಿಸಿದರು. ಶಿಕ್ಷಕಿ ಪಿ.ಜಿ.ಕೆಮಲಾಪೂರೆ ನಿರೂಪಿಸಿದರು. ಶಿಕ್ಷಕ ಸಿ.ಎಸ್.ಧರೆಪ್ಪನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net