ಶತಮಾನೋತ್ಸವದ ಹೊಸ್ತಿಲಲ್ಲಿರುವ ಸರ್ಕಾರಿ ಶಾಲೆಗೆ ಬೀಗ

16 HPT 4
Published on

ನಿವೇಶನ ವಾಪಸ್ ನೀಡುವಂತೆ ಮಾಲೀಕರ ಬಿಗಿ ಪಟ್ಟು

ಶಾಲೆಯ ೯೦ ಮಕ್ಕಳು ವಿದ್ಯಾಭ್ಯಾಸಕ್ಕೆ ಪೆಟ್ಟು?

ವೀರೇಂದ್ರ ನಾಗಲದಿನ್ನಿ ಹೊಸಪೇಟೆ
ನಗರದ ಹೃದಯಭಾಗದ ಕೌಲ್‌ಪೇಟೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಟ್ಯಾಗೂರ್ ಕೌಲ್‌ಪೇಟೆ ಶಾಲೆಗೆ ಇನ್ನೆರಡು ವರ್ಷಗಳಲ್ಲಿ ನೂರು ವರ್ಷ ತುಂಬಲಿದೆ. ಆದರೆ, ಶಾಲೆ ನಿವೇಶನ ವ್ಯಾಜ್ಯದಿಂದಾಗಿ ಶತಮಾನೋತ್ಸವದ ಸಂಭ್ರಮ ಕಾಣುವ ಮುನ್ನವೇ ಬಾಗಿಲು ಮುಚ್ಚಿದ್ದು, ೯೦ಕ್ಕೂ ಹೆಚ್ಚು ಮಕ್ಕಳ ಶಿಕ್ಷಣ ಅತಂತ್ರಕ್ಕೆ ಸಿಲುಕಿದೆ.

ನಗರದ ಕೌಲ್‌ಪೇಟೆ, ಚಿತ್ರಕೇರಿ ಹಾಗೂ ಈ ಭಾಗದ ಇತರೆ ಕೇರಿಗಳ ನೂರಾರು ನೂರಾರು ಮಕ್ಕಳಿಗೆ ದಶಕಗಳಿಂದ ಜ್ಞಾನ ದೀವಿಗೆ ಬೆಳಗಿಸಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ರವೀಂದ್ರನಾಥ್ ಟ್ಯಾಗೋರ್ ಶಾಲೆ ಸ್ಥಳೀಯರಿಗೆ ಅಚ್ಚು ಮೆಚ್ಚು. ಸಮೀಪದಲ್ಲೇ ಹತ್ತಾರು ಖಾಸಗಿ ಶಾಲೆಗಳು ಪ್ರಾರಂಭಗೊAಡಿದ್ದರೂ, ಟ್ಯಾಗೋರ್ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಕೊರತೆಯಿಲ್ಲ. ಸದ್ಯ ಶಾಲೆ ಯಲ್ಲಿ ಇಬ್ಬರು ಅತಿಥಿ ಶಿಕ್ಷಕರು ಸೇರಿದಂತೆ ನಾಲ್ವರು ಶಿಕ್ಷಕರಿದ್ದು, ೧ ರಿಂದ ೭ನೇ ತರಗತಿ ವರೆಗೆ ೫೦ ಹೆಣ್ಣು, ೪೦ ಗಂಡು ಸೇರಿ ಒಟ್ಟು ೯೦ ವಿದ್ಯಾರ್ಥಿಗಳಿದ್ದಾರೆ. ಇತ್ತೀಚೆಗೆ ಶಾಲೆಗೆ ಬೀಗ ಜಡಿದ್ದಿದ್ದರಿಂದ ಮಕ್ಕಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ.

ಏನಿದು ವಿವಾದ?
ಸ್ಥಳೀಯ ನಿವಾಸಿ ದೇಸಾಯಿ ಕುಟುಂಬದವರಿಗೆ ಸೇರಿದ ಅಂದಾಜು ೨೦ * ೮೦ ಅಡಿ ಅಳತೆಯ ನಿವೇಶನದಲ್ಲಿ ೧೯೫೨ ರಲ್ಲಿ ಈ ಶಾಲೆ ಶುಭಾರಂಭಗೊಂಡಿದೆ. ಕಳೆದ ೨೦೧೫ರ ವರೆಗೂ ಯಾವುದೇ ವಿವಾದ, ತಕರಾರು ಇಲ್ಲದೇ ಸುಸೂತ್ರವಾಗಿ ನಡೆದುಕೊಂಡು ಬಂದಿದೆ. ಆದರೆ, ೨೦೧೫ರಲ್ಲಿ ಶಾಲೆಯ ಜಾಗೆ ವಿಚಾರದಲ್ಲಿ ತಗಾದೆ ಶುರುಮಾಡಿದ್ದಾರೆ. ಶಾಲೆಗೆ ಬಾಡಿಗೆ ರೂಪದಲ್ಲಿ ನಿವೇಶನ ನೀಡಲಾಗಿದೆಯೇ ಹೊರತು, ದಾನ ನೀಡಿಲ್ಲ. ಶಾಲಾ ನಿವೇಶನವನ್ನು ಬಿಟ್ಟುಕೊಡುವಂತೆ ದೇಸಾಯಿ ಕುಟುಂಬಸ್ಥರು ಹಕ್ಕು ಪ್ರತಿಪಾದಿಸಿದ್ದಾರೆ.
ನಿವೇಶನಕ್ಕೆ ಸಂಬAಧಿಸಿ ನಗರಸಭೆ ಮತ್ತು ಜೆಸ್ಕಾಂಗೆ ಕಟ್ಟಿರುವ ಸೇವಾ ಶುಲ್ಕದ ಹೊರತಾಗಿ ಶಿಕ್ಷಣ ಇಲಾಖೆ ಬಳಿ ದಾನ ಪತ್ರಗಳು ಲಭ್ಯವಿಲ್ಲ. ೧೦೦ ವರ್ಷಗಳಿಂದೆ ಮಾತಿನ ಮೇಲೆಯೇ ಬಹುತೇಕ ವ್ಯವಹಾರ ನಡೆಯುತ್ತಿತ್ತು. ಅಲ್ಲದೇ, ಜನೋಪಯೋಗಕ್ಕೆ ನಿವೇಶನ ಬಿಟ್ಟುಕೊಡುವಂತೆ ಅಧಿಕಾರಗಳು ಮಾತು. ಇಬ್ಬರ ಮಧ್ಯೆ ಸಂಧಾನ ಏರ್ಪಡದಿದ್ದರಿಂದ ದೇಸಾಯಿ ಕುಟುಂಬಸ್ಥರು ಕೋರ್ಟ್ ಮೆಟ್ಟಿಲೇರಿದ್ದರು.

ತೂಗುಯ್ಯಾಲೆಯಲ್ಲಿ ಜ್ಶಾನದೇಗುಲದ ಅಸ್ಥಿತ್ವ:
ಪ್ರಕರಣದ ವಿಚಾರಣೆ ನಡೆಸಿದ ಹೊಸಪೇಟೆ ಜೆಎಂಎಫ್‌ಸಿ ಕೋರ್ಟ್ ಅಕ್ಟೋಬರ್ ೧೦ ರಂದು ದೇಸಾಯಿ ಕುಟುಂಬದ ಪರ ತೀರ್ಪು ನೀಡಿತ್ತು. ಅದರ ಮರುದಿನವೇ ಶಾಲೆಯಲ್ಲಿದ್ದ ಪೀಠೋಪಕರಣಗಳನ್ನು ಖಾಲಿ ಮಾಡಿಸಿ, ಬೀಗ ಜಡಿದಿದಾರೆ. ಅತಿಕ್ರಮ ಪ್ರವೇಶಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಫಲಕ ಅಳವಡಿಸಿದ್ದಾರೆ. ಈ ತೀರ್ಪು ಪ್ರಶ್ನಿಸಿ ಬಿಇಒ ಕಚೇರಿ ಹೈಕೋರ್ಟ್ ನಿಂದ ಅ.೧೩ ರಂದು ತಡೆಯಜ್ಞೆ ತಂದಿರುವುದು ವಿದ್ಯಾರ್ಥಿಗಳ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಹೊಸಪೇಟೆಯಲ್ಲಿ ಕೆಲ ವರ್ಷಗಳಿಂದ ನಿವೇಶನಗಳ ಬೆಲೆಗಳು ಗಗನಕ್ಕೇರುತ್ತಿವೆ. ಹೀಗಾಗಿ ಪ್ರಕರಣದ ಮುಂದಿನ ತೀರ್ಪಿನ ವರೆಗೆ ಶಾಲೆಯ ಅಸ್ಥತ್ವ ಅಡಕತ್ತರಿಯಲ್ಲಿ ಸಿಲುಕಿದಂತಾಗಿದ್ದು, ಸ್ಥಳೀಯ ಮಕ್ಕಳ ಅನುಕೂಲಕ್ಕಾಗಿ ನಿವೇಶನ ಬಿಟ್ಟುಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ಶಾಲೆಯ ನಿವೇಶನದ ವ್ಯಾಜ್ಯಕ್ಕೆ ಸಂಬಂಧಿಸಿ ಕೆಳ ನಾಯ್ಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಈ ನಡುವೆ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಮ್ಮ ಪರವಾಗಿ ತಡೆಯಾಜ್ಞೆ ನೀಡಿದೆ. ಹೀಗಾಗಿ ಸದ್ಯಕ್ಕೆ ಸಮಸ್ಯೆಯಿಲ್ಲ. ದಸರಾ ರಜೆ ಮುಗಿಯುತ್ತಿದ್ದಂತೆ ಅದೇ ಶಾಲೆಯಲ್ಲಿ ಎಂದಿನಂತೆ ತರಗತಿಗಳು ನಿರ್ವಹಿಸಲಾಗುತ್ತದೆ. - ಚನ್ನಬಸಪ್ಪ, ಬಿಇಒ ಹೊಸಪೇಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net