ಜಿಲ್ಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ

IMG-20230531-WA0005.jpg
Published on



ಬೆಳಗಾವಿ: ಎರಡು ತಿಂಗಳು ಕಾಲ ಬೇಸಿಗೆ ರಜೆಯಲ್ಲಿ  ಊರು, ಕೇರಿ ಎಂದು ಓಡಾಡಿಕೊಂಡಿದ್ದ ಮಕ್ಕಳು ಬುಧವಾರ ಶಾಲೆಗೆ ಆಗಮಿಸಿ  ಸಹಪಾಠಿಗಳೊಂದಿಗೆ ಸಂಭ್ರಮಿಸಿದರು.
ಜಿಲ್ಲಾದ್ಯಂತ ಬುಧವಾರ ಸರ್ಕಾರಿ ಶಾಲೆಗಳು ಆರಂಭವಾಗಿದ್ದು,  ಎಲ್ಲ ಶಾಲೆಗಳಲ್ಲಿ  ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.  ಶಾಲೆ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸಿ, ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಸಿಹಿ ಹಂಚುವ ಮೂಲಕ ವಿದ್ಯಾರ್ಥಿಗಳನ್ನು ಶಿಕ್ಷಕರು, ಸಿಬ್ಬಂದಿ ಬರಮಾಡಿಕೊಂಡರು. ಕೆಲವು ಕಡೆ ವಿದ್ಯಾರ್ಥಿಗಳಿಗೆ, ಪಾಲಕರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಗೋಕಾಕ ತಾಲೂಕಿನ ಅಜ್ಜನಕಟ್ಟಿ, ಮಮದಾಪುರ, ತಳಕಟ್ಟನಾಳ, ಮೂಡಲಗಿ ತಾಲೂಕಿನ ಕುಲಗೋಡ, ವೆಂಕಟಾಪುರ, ತಿಗಡಿ, ಸವದತ್ತಿ ತಾಲೂಕಿನ ಆಲದಕಟ್ಟಿ ಕೆ.ಎಂ, ಯರಗಟ್ಟಿ,ತಲ್ಲೂರು, ಬೈಲಹೊಂಗಲ ತಾಲಕಿನ‌ ನೇಸರಗಿ, ಸೋಮನಟ್ಟಿ, ಬೆಳವಡಿ ಇತತೆ ತಾಲೂಕಿನಲ್ಲಿ ಶಾಲಾ ಆರಂಭೋತ್ಸವ ಹಬ್ಬದಂತೆ ಆಚರಿಸುತ್ತಿರುವ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net