ಸರ್ಕಾರಿ ಶಾಲೆ ದತ್ತು ಪಡೆದ ಇನ್ನರ್​ ವ್ಹೀಲ್​ ಕ್ಲಬ್​

07GDG04
ಬೆಟಗೇರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ದತ್ತು ಪಡೆಯುವ ಕಾರ್ಯಕ್ರಮವನ್ನು ಇನ್ನರ್​ ವ್ಹೀಲ್​ ಕ್ಲಬ್​ ಅಧ್ಯೆ ರಜನಿ ಪಾಟೀಲ್​ ಉದ್ಘಾಟಿಸಿದರು. ನೀಲಾಂಬಿಕ ಉಗಲಾಟದ, ಸರೋಜಾ ಆಲೂರು, ಮೀನಾ ಸಜ್ಜನರ್​, ಪ್ರೇಮ ಮೇಟಿ , ವಿದ್ಯಾ ಗಂಜಿಹಾಳ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಬೆಟಗೇರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯನ್ನು(ನಂ.8)ನಗರದ ಇನ್ನರ್​ ವ್ಹೀಲ್​ ಕ್ಲಬ್​ ಸೋಮವಾರ ದತ್ತು ಪಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಜನಿ ಪಾಟೀಲ್​, ನಾಳೆಯ ಪ್ರಜೆಗಳಾಗಿ ನಾಡನ್ನು ಕಟ್ಟುವ ಮಕ್ಕಳಿಗೆ ಇನ್ನರ್​ ವ್ಹೀಲ್​ ಕ್ಲಬ್​ ಸಂಸ್ಥೆಯು ಪ್ರತಿ ವರ್ಷ ಶೈಣಿಕವಾಗಿ ಅನೇಕ ಮಹತ್ವದ ಸೇವಾಕಾರ್ಯ ಮಾಡುತ್ತಿದೆ ಎಂದರು.
ನೀಲಾಂಬಿಕ ಉಗಲಾಟದ ಮಾತನಾಡಿ. ಇನ್ನರ್​ ವ್ಹೀಲ್​ ಕ್ಲಬ್​ ಆದೇಶ ಪ್ರಕಾರ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಆ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ, ಆರೋಗ್ಯ ತಪಾಸಣೆ, ಪಠ್ಯಪುಸ್ತಕಗಳ ಜೊತೆಗೆ ಹ್ಯಾಪಿಸ್ಕೂಲ್​ ಮಾಡಲು ನಮ್ಮ ಪ್ರಯತ್ನ ಮುಂದಿವರೆದಿದೆ ಎಂದರು.
ಸಿಆರ್​ಸಿ ಬಾಕಿರ್ ಅಧ್ಯಕ್ಷತೆ ವಹಿಸಿದ್ದರು. ಹೇಮಾ ಪೊಂಗಾಲಿಯಾ, ಶಾಂತಿಗೌಡ , ಸುಮಾ ಪಾಟೀಲ್​, ಎಂ.ಎಲ್​. ಹೊಸಳ್ಳಿ, ರೂಪ, ವಿದ್ಯಾ, ಸರೋಜಾ ಆಲೂರು, ಮೀನಾ ಸಜ್ಜನರ್​, ಪ್ರೇಮ ಮೇಟಿ , ವಿದ್ಯಾ ಗಂಜಿಹಾಳ, ಪುಷ್ಪ ಭಂಡಾರಿ, ವಿಜಯಲಕ್ಷಿ$್ಮ ಗುಗ್ಗುರಿ, ಮಂಜುಳಾ ಅಕ್ಕಿ , ಅಶ್ವಿನಿ ಜಗತಾಪ, ವಿಜಯಲಕ್ಷಿ$್ಮ ಮಾನ್ವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net