

ಹನುಮಸಾಗರ: ರೈತರ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಬಿತ್ತನೆಗೆ ಕಡಲೆ, ಬಿಳಿ ಜೋಳದ ಬೀಜ ವಿತರಿಸಿ ಶುಕ್ರವಾರ ಮಾತನಾಡಿದರು. ಆಹಾರ ಉತ್ಪಾದನೆಗೆ ಉತ್ತಮ ಬಿತ್ತನೆ ಬೀಜಗಳ ಅಗತ್ಯವಿದೆ. ಸರ್ಕಾರ ಪ್ರತಿ ವರ್ಷ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಿಸುತ್ತದೆ. ರೈತರು ಆರ್ಥಿಕವಾಗಿ ಪ್ರಗತಿ ಹೊಂದಲು ಶ್ರಮಿಸಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್‌ಸಾಬ್ ಮೂಲಿಮನಿ, ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ, ಶಿವಪುತ್ರಪ್ಪ ದೊಡ್ಡಮನಿ, ಸಿಬ್ಬಂದಿ ಅಂದಾನಪ್ಪ ಹುಗ್ಗಿ, ಭೀಮಸಿ, ರೈತ ಸಂಘದ ಸ್ಥಳೀಯ ಅಧ್ಯಕ್ಷ ಯಮನೂರಪ್ಪ ಮಡಿವಾಳರ, ಕಾರ್ಯದರ್ಶಿ ಉಮೇಶ ಬಾಚಲಾಪುರ, ಮುತ್ತಣ್ಣ ಕಟಗಿ, ಇಸ್ಮಾಯಿಲ್ ಸಾಬ್ ತಹಸೀಲ್ದಾರ್, ಶಿವಕಾಂತಪ್ಪ ಹಾದಿಮನಿ, ಅಹ್ಮದ್ ಮುದಗಲ್ಲ, ಬಸವರಾಜ ಮೋಟಗಿ ಇತರರಿದ್ದರು.