ಸರ್ಕಾರಿ ಪಿಯು ಕಾಲೇಜಿಗೆ ಶೇ. 93.65 ಫಲಿತಾಂಶ

mdg misbha fathima
ಮಿಸ್ಬಾ ಪಾತಿಮಾ
Published on

ಮೂಡಿಗೆರೆ: ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಶೇ. 93.65 ಫಲಿತಾಂಶ ಲಭಿಸಿದೆ.

ಪರೀಕ್ಷೆಗೆ ಹಾಜರಾಗಿದ್ದ 63 ವಿದ್ಯಾರ್ಥಿಗಳಲ್ಲಿ 59 ಮಂದಿ ಉತ್ತೀರ್ಣರಾಗಿದ್ದಾರೆ. 8 ಅತ್ಯುನ್ನತ ಶ್ರೇಣಿ, 41 ಪ್ರಥಮ ದರ್ಜೆ, 10 ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಿಸ್ಬಾ ಪಾತಿಮಾ 575, ಆಯೇಷಾ ನಿಯಾನಾ 570, ವಾಣಿಜ್ಯ ವಿಭಾಗದಲ್ಲಿ ತಸ್ಮೀಯಾ 561, ಜೆ.ಪಿ.ದರ್ಶಿನಿ 543, ಟಿ.ಆರ್.ಸಿಂಚನಾ 535, ಐ.ಎ.ತನ್ವೀರಾ 532, ನಾಜಿಯಾ 525, ವಿಜ್ಞಾನ ವಿಭಾಗದಲ್ಲಿ ಆರ್.ಸುಪ್ರೀತಾ 519, ವಾಣಿಜ್ಯ ವಿಭಾಗದಲ್ಲಿ ವಿ.ಪ್ರೇಕ್ಷಾ 509 ಅಂಕ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net