

ಬೆಳಗಾವಿ: ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿಗಳನ್ನು ಸಂರಕ್ಷಿಸಲು ನಗರ ಸ್ಥಳೀಯ ಸಂಸ್ಥೆಗಳಿಂದ ಹರಸಾಹಸ ಪಡುತ್ತಿರುವುದು ಒಂದೆಡೆಯಾದರೆ, ಆಸ್ತಿಗಳ ಒತ್ತುವರಿ ತೆರವು, ಸರ್ವೇ ಅರ್ಧಕ್ಕೆ ಮೊಟಕುಗೊಂಡಿರುವುದು ಮತ್ತೊಂದೆಡೆ ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಸೇರಿ ಒಟ್ಟು 37 ಸ್ಥಳೀಯ ಸಂಸ್ಥೆಗಳು ನೂರಾರು ಕೋಟಿ ರೂ. ವೌಲ್ಯದ ಆಸ್ತಿಗಳಿದ್ದರೂ ಆದಾಯ ಇಲ್ಲದೆ ಸೊರಗುತ್ತಿವೆ. ಅಕಾರಿಗಳ ನಿರ್ಲಕ್ಷ್ಯ, ಪ್ರಭಾವಿಗಳ ಒತ್ತಡ, ಅನುದಾನ ಕೊರತೆ ಇತರ ಕಾರಣಗಳಿಂದ ಸ್ಥಳೀಯ ಸಂಸ್ಥೆಗಳು ತನ್ನ ಒಡೆತನದ ಆಸ್ತಿಗಳ ಪತ್ತೆ, ಸಂರಕ್ಷಣೆ, ಒತ್ತುವರಿ ತೆರವು ಹಾಗೂ ಆಸ್ತಿಗಳ ಸರ್ವೇಗೆ ಮುಂದಾಗದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು 5.20 ಲಕ್ಷಕ್ಕೂ ಹೆಚ್ಚು ಆಸ್ತಿಗಳಿವೆ. ಆದರೆ, ಆಸ್ತಿಗಳ ದಾಖಲೆಗಳ ನಿರ್ವಹಣೆ, ಸಂರಕ್ಷಣೆ ಇಲ್ಲದೆ ಸಂಪೂರ್ಣ ಹಾಳಾಗಿವೆ. ಕೆಲವೆಡೆ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲವೆಡೆ ನಾನಾ ಉದ್ದೇಶಕ್ಕಾಗಿ 50 ರಿಂದ 99 ವರ್ಷಗಳ ಕಾಲ ಗುತ್ತಿಗೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಸರ್ಕಾರಿ ಆಸ್ತಿಗಳ ಮೂಲ ದಾಖಲೆಗಳು ಲಭ್ಯವಾಗುತ್ತಿಲ್ಲ. ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತಿಲ್ಲ. ವಾರ್ಷಿಕ ಕೋಟ್ಯಂತರ ರೂ. ತೆರಿಗೆ ನಷ್ಟ ಉಂಟಾಗುತ್ತಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾರುಕಟ್ಟೆ, ಕೈಗಾರಿಕೆ ಪ್ರದೇಶ, ಜನವಸತಿ ಪ್ರದೇಶ ಸೇರಿ ವಿವಿಧೆಡೆ ಸಾರ್ವಜನಿಕ ಆಸ್ತಿಗಳಿವೆ. ಕಟ್ಟಡಗಳು, ಉದ್ಯಾವನಗಳು, ಪಾರ್ಕಿಂಗ್ ಸ್ಥಳಗಳಿವೆ. ಇವುಗಳಲ್ಲಿ ವಿವಿಧ ಕಾರಣಗಳಿಗಾಗಿ ಗುತ್ತಿಗೆ ನೀಡಿರುವ ನೂರಾರು ಆಸ್ತಿಗಳ ಗುತ್ತಿಗೆ ಅವ ಮುಗಿದಿವೆ. ಆದರೆ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವಿವಿಧ ಕಾರಣಕ್ಕಾಗಿ ಅಲ್ಲಲ್ಲಿ ಮೀಸಲಿಟ್ಟಿರುವ ಖಾಲಿ ನಿವೇಶನಗಳ ಪ್ರದೇಶಗಳನ್ನು ಸುತ್ತಮುತ್ತಲಿನ ಪ್ರದೇಶದಲ್ಲಿ ಜನರಿಂದ ಒತ್ತುವರಿಯಾಗಿವೆ. ಅಂತಹ ಆಸ್ತಿಗಳ ವಶಕ್ಕೆ ಪಡೆದುಕೊಳ್ಳಲು ಸರ್ವೇ ಮಾಡುವುದು ಅನಿವಾರ್ಯವಾಗಿದೆ.
ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆಯು ತನ್ನ ಆಸ್ತಿಗಳ ಪತ್ತೆ, ಸಂರಕ್ಷಣೆ, ಒತ್ತುವರಿ ತೆರವು ಹಾಗೂ ಸರ್ವೇ ಮಾಡಲು 50 ಲಕ್ಷ ರೂ. ವೆಚ್ಚದ ಕ್ರಿಯಾಯೋಜನೆಗೆ ವರ್ಕ್ ಆರ್ಡರ್ ನೀಡಿ ಕಾರ್ಯ ಆರಂಭಿಸಿತ್ತು. ಆದರೆ, ಕಾರಣಾಂತರಗಳಿಂದ ಅದು ಮುಂದುವರಿದಿಲ್ಲ. ಇನ್ನೂ ಗೋಕಾಕ, ನಿಪ್ಪಾಣಿ ನಗರಸಭೆಗಳು ಹಾಗೂ ಪುರಸಭೆಗಳು ಸ್ವಂತ ಆಸ್ತಿಗಳಿದ್ದರೂ ಅವುಗಳನ್ನು ಸಂರಕ್ಷಿಸಲು ಹರಸಾಹಸಪಡುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ಸಂಸ್ಥೆಗಳ ಕಂದಾಯ ವಿಭಾಗದ ಅಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಿಸಿ ಅವುಗಳನ್ನು ಆನ್‌ಲೈನ್ ವೇದಿಕೆಯಲ್ಲಿ ಅಳವಡಿಸುವ ಸಲುವಾಗಿ ನ್ಯಾಷನಲ್ ಇನರ್ಮ್ಯಾಟಿಕ್ಸ್ ಸೆಂಟರ್‌ನ (ಎನ್‌ಐಸಿ) ಸಹಕಾರದಲ್ಲಿ ಇ-ಆಸ್ತಿ ತಂತ್ರಾಂಶ ರೂಪಿಸಿ ಜಾರಿಗೊಳಿಸಿದೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ, ದಾಖಲೆಗಳ ಸಮಸ್ಯೆಗಳಿಂದಾಗಿ ಇ-ಆಸ್ತಿ ತಂತ್ರಾಂಶ ಸಮರ್ಪಕವಾಗಿ ಜಾರಿಗೊಳಿಸಲು ಅದಿಕಾರಿಗಳಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ತಿಗಳ ಸಂರಕ್ಷಣೆ, ಒತ್ತುವರಿ ತೆರವು ಕುರಿತು ಸ್ಥಳೀಯ ಸಂಸ್ಥೆಗಳ ಸದಸ್ಯರು ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆ ಸಂಬಂಸಿದ ಅಕಾರಿಗಳಿಗೆ ಸೂಚನೆ ನೀಡಲಾಗಿದೆ.| ಮಲ್ಲಿಕಾರ್ಜುನ ಕಲಾದಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ