ಸರ್ಕಾರದ ಯೋಜನೆ ಲಾಭ ಪಡೆಯಲಿ

2
ಸಂಬರಗಿಯ ಪಿಕೆಪಿಎಸ್‌ನಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ಉಪಾಧ್ಯಕ್ಷ ಅಣ್ಣಪ್ಪ ಮೀಸಾಳ ಉದ್ಘಾಟಿಸಿದರು. ವಿಲಾಸ ಟೋಣೆ, ಧರ್ಮು ನರುಟೆ, ತೋಂಡಿಬಾ ಮಿಸಾಳ ಇತರರು ಇದ್ದರು.
Published on

ಸಂಬರಗಿ: ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂಘದಲ್ಲಿ ರೈತರಿಗೆ ಎಲ್ಲ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಿಕೆಪಿಎಸ್ ಉಪಾಧ್ಯಕ್ಷ ಅಣ್ಣಪ್ಪ ಮೀಸಾಳ ಹೇಳಿದರು.

ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕಷಿ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸಾಮಾನ್ಯ ಸೇವಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ವಾಹನದ ಇನ್ಶೂರೆನ್ಸ್ ಪಾವತಿ, ರೈಲ್ವೆ, ವಿಮಾನದ ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯವಿದ್ದು ಸದುಪಯೋಗ ಪಡೆದುಕೊಳ್ಳಬೇಕು.

ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಪ್ರಯತ್ನದಿಂದ ಸಂಘ ನೀಡಿದ ಭರವಸೆ ಈಡೇರಿಸಲಾಗಿದೆ. ರೈತರ ಸಾಲ ಮರುಪಾವತಿ ಮಾಡಲಾಗಿದೆ ಎಂದರು. ಸಂಘದ ಅಧ್ಯಕ್ಷ ವಿಲಾಸ ಟೋಣೆ, ಧರ್ಮು ನರುಟೆ, ತುಕಾರಾಂ ಸೆಳ್ಕೆ, ರಾಜು ಪಾಸಲೆ, ವಿಠ್ಠಲ ಗಸ್ತಿ, ಸರ್ಜೆರಾವ ಮಾನೆ, ಪಿಂಟು ನಾಟಿಕರ, ಸುಷ್ಮಾ ದೇವಮಾನಿ, ಸಾವಿತ್ರಿ ಅವಳೇಕರ, ಟೋಪಾಜಿ ಅವಳೇಕರ, ಬಾಬು ಬಂಡಿಗಾರ, ಸುರೇಶ ಟೋಣೆ, ಅಣ್ಣಪ್ಪ ಟೋಣೆ, ಮುಖ್ಯ ಕಾರ್ಯನಿರ್ವಾಹಕ ತೋಂಡಿಬಾ ಮಿಸಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net