ಸರ್ಕಾರಿ ಅಧಿಕಾರಿಯ ಪೋನ್​​ ಪೇ ಹ್ಯಾಕ್​ ಮಾಡಿ ವಂಚನೆ

Cibra
Published on

ಬ್ಯಾಡಗಿ: ಸರ್ಕಾರಿ ಅಧಿಕಾರಿಯೊಬ್ಬರ ಪೋನ್​ ಪೇ ಆ್ಯಪ್​ಅನ್ನು ಹ್ಯಾಕ್​ ಮಾಡಿ ಅವರ ಖಾತೆಯಿಂದ 1.14 ಲಕ್ಷ ರೂ. ಬೇರೆ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ನಗರದ ನಿವಾಸಿ ಹಾಗೂ ಹಾವೇರಿ ಪ್ರಥಮ ಪ್ರಥಮ ದರ್ಜೆ ಕಾಲೇಜ್​ನ ಅಧೀಕ್ಷಕ ತಿರಕಪ್ಪ ಪುಟ್ಟಪ್ಪ ಕುಲಕಣಿರ್ (58) ಎಂಬುವರಿಗೆ ಮೋಸ ಮಾಡಿರುವುದು.
ಇವರ ಮೊಬೈಲ್​ನಲ್ಲಿದ್ದ ಪೋನ್​ ಪೇ ಆ್ಯಪ್​ಅನ್ನು ಹ್ಯಾಕ್​ ಮಾಡಿದ ಅಪರಿಚಿತ ವ್ಯಕ್ತಿ 1.14 ಲಕ್ಷ ರೂ. ಅನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net