ಸೂಗೂರು ಸರ್ಕಾರಿ ಭೂಮಿ ವಶಕ್ಕೆ

1912wdgr01
ವಡಗೇರಾ ತಾಲೂಕಿನ ಸೂಗೂರು ಗ್ರಾಮದ ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸ್ಥಳಕ್ಕೆ ತಹಸೀಲ್ದಾರ್ ಶ್ರೀನಿವಾಸ ಚಾಪೇಲ್ ತೆರಳಿ ವಶಪಡಿಸಿಕೊಂಡರು. ಕಂದಾಯ ನಿರೀಕ್ಷಕ ಸಂಜುಕಜಮಾರ ಇತರರಿದ್ದರು.
Published on

ವಡಗೇರಾ: ತಾಲೂಕಿನ ಗೋನಾಲ ಗ್ರಾಮ ಪಂಚಯಿತಿ ವ್ಯಾಪ್ತಿಯ ಸೂಗೂರು ಗ್ರಾಮದ ಸರ್ಕಾರಿ ಜಮೀನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಸೋಮವಾರ ತಹಸೀಲ್ದಾರ್ ಸ್ಥಳಕ್ಕೆ ತೆರಳಿ ವಶಪಡಿಸಿಕೊಂಡರು.

ಜಿಲ್ಲಾಧಿಕಾರಿ ಡಾ.ಸುಶೀಲಾ ಅವರ ಆದೇಶದ ಮೇರೆಗೆ ಗ್ರಾಮದ ಸರ್ವೇ ನಂ.೭ ಮತ್ತು ೧೨ರಲ್ಲಿ ಸರ್ಕಾರಿ ಭೂಮಿ ಅನಧಿಕೃತವಾಗಿ ಒತ್ತುವಾರಿ ಮಾಡಿಕೊಂಡು ಸಾಗುವಳಿ ಮಾಡಿಕೊಳ್ಳುತ್ತಿದ್ದರು. ಸೋಮವಾರ ಸ್ಥಳಕ್ಕೆ ತೆರಳಿದ ಕಂದಾಯ ಅಧಿಕಾರಿ, ಪೊಲೀಸರ ನೇತೃತ್ವದಲ್ಲಿ ಕ್ರಮ ಕೈಗೊಂಡು ವಶಪಡಿಸಿಕೊಳ್ಳಲಾಗಿದೆ.

ಸರ್ವೇ ನಂ. ೭ರಲ್ಲಿ ೯ ಎಕರೆ, ೧೨ರಲ್ಲಿ ೩೮.೦೫ ಎಕರೆ ಇದ್ದು, ಈ ಭೂಮಿ ಪೊಲೀಸ್ ಬಂದೋಬಸ್ತ್​ನಲ್ಲಿ ಸರ್ವೇ ಮಾಡಿ ಬೌಂಡರಿ ಫಿಕ್ಸ್ ಮಾಡಲಾಗಿದೆ. ಅಲ್ಲದೆ ಕೆಲ ಸ್ಥಳಗಳಲ್ಲಿ ಅಕ್ರಮ ಶೆಡ್ ನಿರ್ಮಾಣವಾಗಿದ್ದು ಅವುಗಳನ್ನು ಪೊಲೀಸ್ ಬಂದೋಬಸ್ತ್​ನಲ್ಲಿ ತೆರವುಗೊಳಿಸಬೇಕು ಎಂದು ಕೋಲಿ ಸಮಾಜದ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net