ಸರ್ಕಾರದ ಆರೋಗ್ಯ ಸೌಲಭ್ಯಗಳನ್ನು ಪಡೆಯಿರಿ

28ALD03
ಅಳವಂಡಿ ಸಮೀಪದ ಮೈನಹಳ್ಳಿ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕುರಿತ ಬೀದಿ ನಾಟಕ ನಡೆಯಿತು, ಪ್ರಮುಖರಾದ ವೀರೇಶ, ಬಸಪ್ಪ, ಸಾವಿತ್ರಿ, ಸಿದ್ದಲಿಂಗಯ್ಯ, ಸಿದ್ದಲಿಂಗಮ್ಮ, ಗ್ಯಾನೇಶ ಇತರರಿದ್ದರು.
Published on

ಅಳವಂಡಿ: ಸರ್ಕಾರ ಗ್ರಾಮೀಣ ಜನರ ಆರೋಗ್ಯಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಉಪಯೋಗ ಪಡೆದುಕೊಳ್ಳಿ ಎಂದು ಕಲಾ ತಂಡ ಅಧ್ಯಕ್ಷ ವೀರೇಶ ಹಾಲಗುಂದಿ ತಿಳಿಸಿದರು.

ಸಮೀಪದ ಮೈನಹಳ್ಳಿಯಲ್ಲಿ ಕರ್ನಾಟಕ ಸರ್ಕಾರ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷಣಾ ಘಟಕ, ಆರೋಗ್ಯ ಕ್ಷೇಮ ಕೇಂದ್ರ ಮೈನಹಳ್ಳಿ ಸಹಯೋಗದಲ್ಲಿ ಶ್ರೀಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘ ಅಳವಂಡಿಯಿಂದ ನಡೆದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಕುರಿತ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಬೀದಿ ನಾಟಕದ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಯಿತು.

ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಮೂಲಕ 12 ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗರ್ಭಿಣಿಯರು, ಮಗುವಿನ ಆರೈಕೆ, ಹದಿಹರೆಯದವರ ಆರೋಗ್ಯ, ಆಪ್ತ ಸಮಾಲೋಚನೆ ನಡೆಸಿ ಸೂಕ್ತ ಔಷಧಿ ಉಪಚಾರ, ಹಾಗೂ ಸಲಹೆ ಸಹಕಾರ ನೀಡುವ ಮೂಲಕ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಆರೋಗ್ಯ ನೀರಿಕ್ಷಣಾಧಿಕಾರಿ ಬಸಪ್ಪ ಗಾಳಿ, ಸಮುದಾಯ ಆರೋಗ್ಯ ಅಧಿಕಾರಿ ಸಾವಿತ್ರಿ ಹಿರೇಮಠ, ಆರೋಗ್ಯ ಸುರಕ್ಷತಾಧಿಕಾರಿ ದಿಲ್‌ಖುಷ್‌ಬೂ, ಆಶಾ ಕಾರ್ಯಕರ್ತೆಯರಾದ ಲಲಿತವ್ವ, ಮರಿಯವ್ವ, ಕಲಾವಿದರಾದ ಸಿದ್ದಲಿಂಗಯ್ಯ, ಸಿದ್ದಲಿಂಗಮ್ಮ, ಶಿವಲಿಂಗಮ್ಮ, ಗ್ಯಾನೇಶ, ದಾವಲಸಾಬ, ಶರಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net