ಸರ್ಕಾರಿ ಮಾರ್ಗಸೂಚಿ ಪಾಲಿಸಲಿ

2
ರಾಯಬಾಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಹಸೀಲ್ದಾರ್ ಸುರೇಶ ಮುಂಜೆ ಆಕ್ಸಿಜನ್ ಪ್ಲಾಂಟ್ ವೀಕ್ಷಿಸಿದರು. ಡಾ.ಎಸ್.ಎಂ.ಪಾಟಿಲ, ಡಾ.ಆರ್.ಎಚ್.ರಂಗಣ್ಣವರ, ಎಸ್.ಎಸ್.ಪಾಟೀಲ ಇದ್ದರು.
Published on

ರಾಯಬಾಗ: ಕೋವಿಡ್-19 ತಡೆಗೆ ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕೆಂದು ತಹಸೀಲ್ದಾರ್ ಸುರೇಶ ಮುಂಜೆ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್ ಹರಡದಂತೆ ಶಾಲೆ ಮಕ್ಕಳಿಂದ ಜಾಥಾ, ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಧ್ವನಿವರ್ಧಕಗಳ ಮೂಲಕ ಜಾಗತಿ ಮೂಡಿಸುವಂತೆ ತಿಳಿಸಿದರು.

60 ವರ್ಷ ಮೇಲ್ಪಟ್ಟ ಹಿರಿಯರು, ದೀರ್ಘಾವಧಿ ಕಾಯಿಲೆಯಿಂದ ಬಳಲುವವರು, ಮಧುಮೇಹ, ಕ್ಯಾನ್ಸರ್, ಹದಯ ಸಂಬಂಧಿ ರೋಗಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದರು. ಎಸ್‌ಒಪಿ ಮಾರ್ಗಸೂಚಿ ಪ್ರಕಾರ ಔಷಧ ದಾಸ್ತಾನು, ಐಸಿಯು ಬೆಡ್, ಆಕ್ಸಿಜನ್ ಪ್ಲಾಂಟ್‌ಗಳ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರು ಜೆಎನ್-1 ಬಗ್ಗೆ ಭಯಪಡದೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ನಂತರ ಆಕ್ಸಿಜನ್ ಪ್ಲಾಂಟ್, ಐಸಿಯು ಕೇರ್ ಯೂನಿಟ್ ಪರೀಶಿಲಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಂ.ಪಾಟೀಲ, ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ತಾಲೂಕು ಶಿಕ್ಷಣಾಧಿಕಾರಿ ಎಸ್.ಎಸ್.ಪಾಟೀಲ, ತಾಪಂ ಎಡಿಪಿಆರ್ ವಾಸುದೇವ ಎಸ್.ವಿ., ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net