

ಮೈಸೂರು: ಗಣಿಗಾರಿಕೆ ಮಾಡಲು ಜಿಂದಾಲ್ ಕಂಪನಿಗೆ ರೈತರ ಭೂಮಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರವು ಬಳ್ಳಾರಿಯನ್ನು ‘ರಿಪಬ್ಲಿಕ್ ಆಫ್ ಜಿಂದಾಲ್’ ವಾಡಲು ಹೊರಟಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹರಿಹಾಯ್ದರು.
ಜಿಂದಾಲ್ ಕಂಪನಿಗೆ 3677 ಎಕರೆ ನೀಡಿದ್ದು, 12 ವರ್ಷಗಳ ಹಿಂದೆ ಜನಾರ್ದನ ರೆಡ್ಡಿ ಹಾಗೂ ಸಹೋದರರ ವಿರುದ್ಧ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಆರೋಪಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು. ಈಗ ಅದನ್ನು ರಿಪಬ್ಲಿಕ್ ಆಫ್ ಜಿಂದಾಲ್ ವಾಡಲು ಅದೇ ಕಾಂಗ್ರೆಸ್ ಹೊರಟಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಈ ಹಿಂದೆ ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗ ಗಣಿಗಾರಿಕೆಗೆ ಅವಕಾಶ ವಾಡಿಕೊಡುತ್ತಿದೆ. ಬಳ್ಳಾರಿಂು ಪರಿಸ್ಥಿತಿ ನಾಳೆ ಮೈಸೂರು, ಚಾಮರಾಜನಗರಗಳಿಗೂ ಬರಬಹುದು.
ಇದರ ವಿರುದ್ಧ ರೈತ ಸಂಘ ಹೋರಾಟ ವಾಡುತ್ತದೆ. ಜೀವನೋಪಾಯಕ್ಕಾಗಿ ತುಂಡು ಭೂಮಿ ಉಳಿಮೆ ವಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಸರ್ಕಾರವು ಬೆಲೆ ಬಾಳುವ, ಖನಿಜ ಸಂಪತ್ತನ್ನು ಒಳಗೊಂಡಿರುವ ಭೂಮಿಂುನ್ನು ಅತಿ ಕಡಿಮೆ ಬೆಲೆಗೆ ಜಿಂದಾಲ್ ಕಂಪನಿಗೆ ವಾರಾಟ ವಾಡುತ್ತಿದೆ. ಒಂದು ಎಕರೆಗೆ ಕೇವಲ 1,22,200 ರೂ. ಮತ್ತು 1,50,635 ರೂ.ಗೆ ವಾರಾಟ ಮಾಡಲು ತೀರ್ಮಾನಿಸಿದೆ. ಇದರ ಹತ್ತು ಪಟ್ಟು ಜಾಸ್ತಿ ಬೆಲೆ ನೀಡಿ ಭೂಮಿಯನ್ನು ಖರೀದಿಸಲು ರೈತರು ಸಿದ್ಧರಿದ್ದಾರೆ. ಸರ್ಕಾರವು ಜಿಂದಾಲ್‌ಗೆ ವಾರಾಟ ವಾಡುವ ಬದಲು ರೈತರಿಗೆ ವಾರಾಟ ವಾಡಿ ಎಂದು ತಿಳಿಸಿದರು.
ಗಣಿಗಾರಿಕೆಗೆ ಜಮೀನು ನೀಡುತ್ತೇವೆ ಎಂದು ಸಚಿವರಾದ ಎಂ.ಬಿ.ಪಾಟೀಲ್, ಡಿ.ಕೆ.ಶಿವಕುವಾರ್ ಹೇಳಿದ್ದಾರೆ. ಈವರೆಗೂ ಎಷ್ಟು ರೈತರ ಜಮೀನು ವಶಪಡಿಸಿಕೊಂಡಿದ್ದೀರಿ ಹಾಗೂ ಉದ್ಯೋಗ ಸೃಷ್ಟಿ ವಾಡಿರುವುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಕೈಗಾರಿಕೆಯಿಂದ ಉದ್ಯೋಗ ಸೃಷ್ಟಿ ಆಗಿದೆಯೇ ಅಥವಾ ಕೃಷಿಯಿಂದ ಉದ್ಯೋಗ ಸೃಷ್ಟಿ ಆಗಿದೆಯೇ? ಎಂ.ಬಿ. ಪಾಟೀಲ್ ಈ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಸಂಡೂರು ತಾಲೂಕಿನ ದೇವದಾರಿ ಅರಣ್ಯಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕೇಂದ್ರ ಸಚಿವ ಎಚ್.ಡಿ.ಕುವಾರಸ್ವಾಮಿ ಅನುಮತಿ ನೀಡಿದ್ದಾರೆ. ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ 1.30 ಲಕ್ಷ ಮರಗಳ ಹನನವಾಗಲಿದೆ. ಅಪಾರ ಪ್ರವಾಣದ ವನ್ಯಜೀವಿಗಳು, ಅರಣ್ಯಸಂಪತ್ತು ನಾಶವಾಗಲಿದೆ. ಈಗಾಗಲೇ ಗಣಿಗಾರಿಕೆಯಿಂದ ಅಲ್ಲಿನ ಹಳ್ಳಿಗಳ ಹಾಗೂ ಜನರ ಪರಿಸ್ಥಿತಿ ಹದಗೆಟ್ಟಿದೆ. ಧೂಳಿನ ಕಣಗಳು ಕೃಷಿಯನ್ನೂ ಹಾಳು ವಾಡಿದೆ. ರೋಗಗಳಿಗೆ ಅಲ್ಲಿನ ಜನ ತುತ್ತಾಗುತ್ತಿದ್ದಾರೆ. ಆದ್ದರಿಂದ ಅಲ್ಲಿ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಪಿ.ಮರಂಕಂ್ಯು, ಪ್ರಸನ್ನ ಎನ್.ಗೌಡ, ಆನಂದೂರು ಪ್ರಭಾಕರ್, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಸಿರಮಳ್ಳಿ ಸಿದ್ದಪ್ಪ, ಶೋಭಾ ಪ್ರಭಾಕರ್ ಇದ್ದರು.