

ಸಿಂಧನೂರು: ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಿದ್ದು, ಈಗಾಗಲೇ ಬಹುತೇಕ ಶಾಲೆಗಳಿಗೆ ಕಟ್ಟಡ ಇತರ ಸೌಲಭ್ಯ ಒದಗಿಸಲಾಗಿದೆ ಎಂದು ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಾಲೂಕಿನ ತುರ್ವಿಹಾಳದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯ ಎರಡು ಕೊಠಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಜನವಾಡದ ಮೂರು ಕೊಠಡಿ, ನಾಡ ಕಚೇರಿ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಶಿಕ್ಷಣದ ಪ್ರಗತಿಗೆ ಹೆಚ್ಚು ಯೋಜನೆಗಳನ್ನು ತಂದಿದ್ದೇವೆ. ಶಿಕ್ಷಕರು ಇದರ ಸದುಪಯೋಗ ಪಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಬಹುದಿನಗಳ ಬೇಡಿಕೆಯಾಗಿದ್ದ ನಾಡ ಕಚೇರಿಗೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ರೈತರಿಗೆ ಬಹಳ ತೊಂದರೆಯಾಗಿತ್ತು. ಈಗ ಸ್ವಂತ ಕಟ್ಟಡ ಒದಗಿಸಲಾಗಿದ್ದು ಜನರಿಗೆ ಸಕಾಲದಲ್ಲಿ ಸೇವೆ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಅರುಣ್ ಎಚ್. ದೇಸಾಯಿ, ಉಪ ತಹಸೀಲ್ದಾರ್ ಮರೇಗೌಡ, ಕಂದಾಯ ನಿರೀಕ್ಷಕ ವೀರೇಶ ಬಾಬು, ಗ್ರಾಮ ಲೆಕ್ಕಾಧಿಕಾರಿಗಳಾದ ಬಂದೇ ನವಾಜ್, ಸುಚೇತಾ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮಲ್ಲನಗೌಡ ದೇವರಮನೆ ,ಫಾರೂಕ್ಸಾಬ್ ಖಾಜಿ, ಉಮರಸಾಬ್, ಗೂಳಪ್ಪ ಕುಂಟೋಜಿ, ಶಾಮಿದ್ಸಾಬ್, ಬಾಪುಗೌಡ ದೇವರಮನೆ, ಶರಣಬಸವ ಗಡೇದ್, ಆರ್. ಶಿವನಗೌಡ, ಮಹಾಂತೇಶ್ ಗಾಣಿಗೇರ, ರಮೇಶ್ ದಲಬಂಜನ್, ಶಾಮಿದ್ ಅಲಿ ಅರಬ್, ಮರಿಯಪ್ಪ ನಾಮದ್, ಅರವಿಂದ್ ರೆಡ್ಡಿ , ಭೀಮದಾಸ್, ಶಂಕರ್ ಗೌಡ ದೇವರ ಮನೆ ಇತರರಿದ್ದರು.