

ಚಿತ್ರದುರ್ಗ: ಉಚಿತ ಲ್ಯಾಪ್‌ಟಾಪ್ ಬೇಡಿಕೆ ಮುಂದಿರಿಸಿ ಮೊಳಕಾಲ್ಮೂರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಹಾಗೂ ಫೈನಲ್ ಇಯರ್ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ನಮಗೂ ಉಚಿತವಾಗಿ ಲ್ಯಾಪ್‌ಟಾಪ್ ಕೊಡಿ ಎಂದು ಹಕ್ಕೊತ್ತಾಯಿಸಿ ಬೆಳಗ್ಗೆ ಎಂಟು ಗಂಟೆಯಿಂದಲೇ ತರಗತಿ ಬಹಿಷ್ಕರಿಸಿ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ, ಸರ್ಕಾರದ ತಾರತಮ್ಯ ಮಾಡುತ್ತಿದೆ ಎಂಬ ಆರೋಪ.
ವಾಣಿಜ್ಯ, ಕಲಾ ಹಾಗೂ ಬಿಎಸ್ ಡಬ್ಲ್ಯು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿ.
ಮಂಜುನಾಥ, ಗೌರಮ್ಮ, ಪ್ರಕಾಶ, ನಯನಾ, ಅರ್ಪಿತಾ, ಮಹಾಂತೇಶ, ವಿಜಯಕುಮಾರ್ ರಮೇಶ್ ಸೇರಿ ಹಲವು ಪ್ರಮುಖ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.