ಸರ್ಕಾರಿ ನೌಕರರ ಸಂಘಕ್ಕೆ ನಿರ್ದೇಶಕರ ಆಯ್ಕೆ

28 KMP 03
ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ವಿಜೇತರಾದ ಎಚ್.ಹುಲುಗಪ್ಪ, ಕೆ.ಹನುಮಂತಪ್ಪಗೆ ಚುನಾವಣಾಧಿಕಾರಿ ವಿ.ಪಕ್ಕೀರಪ್ಪ ಪ್ರಮಾಣ ಪತ್ರ ವಿತರಿಸಿದರು. ಪ್ರಮುಖರಾದ ಚಂದ್ರಯ್ಯಸೊಪ್ಪಿಮಠ, ರೇಣುಕಾರಾಧ್ಯ, ಹನುಮಂತಪ್ಪ, ನಾಗನಗೌಡ ಎಂ.ಎ., ಎಚ್.ದೊಡ್ಡಬಸಪ್ಪ ಇತರರಿದ್ದರು.
Published on

ಕಂಪ್ಲಿ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ನಿರ್ದೇಶಕರ ಚುನಾವಣೆ ಸೋಮವಾರ ನಡೆಯಿತು. ತಾಪಂ ಕಚೇರಿ ಮತಕ್ಷೇತ್ರದ ಎರಡೂ ಸ್ಥಾನಗಳಿಗೆ ಮೂವರು ಸ್ಪರ್ಧಿಸಿದ್ದು, ಒಟ್ಟು 23ಮತದಾರರಲ್ಲಿ 22ಜನ ಮತಚಲಾಯಿಸಿದ್ದರು. ಎಚ್.ಹುಲುಗಪ್ಪಗೆ 17, ಹನುಮಂತಪ್ಪಗೆ 13 ಗಳಿಸಿ ಜಯಗಳಿಸಿದರು. ಸಮೀಪದ ಪ್ರತಿಸ್ಪರ್ಧಿ ಬೀರಲಿಂಗ 12ಮತ ಪಡೆದರು. ನ.16ರಂದು ಸಂಘದ ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 26ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಚುನಾವಣೆ ಅಧಿಕಾರಿ ವಿ.ಪಕ್ಕೀರಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net