ಹಾವೇರಿ: ಸರ್ಕಾರಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಪರದಾಡುವಂತಾಗಿದೆ.
ತುರ್ತು ಚಿಕಿತ್ಸೆ, ಹೊರ ರೋಗಿಗಳ ಸಿಬ್ಬಂದಿಯೂ ಗೈರಾಗಿದ್ದರಿಂದ ರೋಗಿಗಳು ಪರದಾಡಿದರು
ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಆವರಣದಲ್ಲಿ ರೋಗಿಗಳ ಸಂಬಂಧಿಕರು ಕಣ್ಣೀರಿಟ್ಟರು. ಸವಣೂರಿನ ದಂಪತಿ ಅನಾರೋಗ್ಯ ಪೀಡಿತ ಮಗು ಎತ್ತಿಕೊಂಡು ಓಡೋಡಿ ಬಂದರು.