ಕಾಲೇಜಿಗೆ ಕಳಪೆ ಸಾಮಗ್ರಿ ಪೂರೈಕೆ ?

govt degree collage koppal low quality metirials supply
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
Published on
  • 97.36 ಲಕ್ಷ ರೂ. ಅನುದಾನ
  • ಗುಣಮಟ್ಟ ಪರೀೆಗಿಳಿದ ಸಿಇಒ

ವಿಜಯವಾಣಿ ವಿಶೇಷ ಕೊಪ್ಪಳ

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸಲು ಕೆಕೆಆರ್​ಡಿಬಿಯಡಿಯಿಂದ 97 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಕಳಪೆ ಗುಣಮಟ್ಟದ ವಸ್ತುಗಳನ್ನು ಪೂರೈಸಿರುವ ಆರೋಪ ಕೇಳಿ ಬಂದಿದೆ. ಸ್ವತ@ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ವಸ್ತುಗಳ ಗುಣಮಟ್ಟ ಪರೀೆಗೆ ಮುಂದಾಗಿದ್ದು ಪ್ರಕರಣ ಏನಾಗಲಿದೆ ಎಂಬ ಕುತೂಹಲ ಹೆಚ್ಚಿಸಿದೆ.

ನಗರದ ಹೃದಯ ಭಾಗದಲ್ಲಿ ಕಾಲೇಜು ಇದ್ದು, ಬಿಎ, ಬಿಕಾಂ, ಬಿಎಸ್ಸಿ ವಿಭಾಗಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಸೌಕರ್ಯಗಳಿಲ್ಲ. ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್​ ಲ್ಯಾಬ್​, ಡಿಜಿಟಲ್​ ಪಾಠ ಬೋಧನೆಗೆ ಬೇಕಾದ ವಸ್ತುಗಳು, ಕ್ರೀಡಾ ಸಾಮಗ್ರಿ ಸೇರಿ ವಿಧದ ಮೂಲ ಸೌಕರ್ಯ ಕಲ್ಪಿಸುವ ಜರೂರಿದೆ. ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 2022&23ನೇ ಸಾಲಿನಲ್ಲಿ ಮೆಗಾ ಮ್ಯಾಕ್ರೋ ಯೋಜನೆಯಡಿ 97.65 ಲಕ್ಷ ರೂ.ಅನುದಾನ ಬಿಡುಗಡೆಗೊಳಿಸಿದ್ದು, ಮೂಲ ಸೌಕರ್ಯ ಕಲ್ಪಿಸಲು ಮುಂದಾಗಿದೆ.

ಕಂಪ್ಯೂಟರ್​, ಯುಪಿಎಸ್​, ಟೇಬಲ್​, ಡೆಸ್ಕ್​, ಪೋಡಿಯಂ, ಡಿಜಿಟಲ್​ ಪೋಡಿಯಂ, ಪ್ರೋಜೆಕ್ಟರ್​, ಅಲ್ಮೆರಾ, ಸಿಸಿಟಿವಿ ಕ್ಯಾಮೆರಾ, ಸ್ಪೀಕರ್​, ಮೈಕ್ರೋೋನ್​, ಪ್ರಿಂಟರ್​ ಸೇರಿ ಆಟದ ಸಾಮಗ್ರಿ ಖರೀದಿಸಲಾಗಿದೆ. ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ವಿಭಾಗ ಅನುಷ್ಠಾನ ಜವಾಬ್ದಾರಿ ಹೊತ್ತಿದೆ. ರಾಯಚೂರು ಮೂಲದ ಕಂಪನಿಗೆ ಕಳೆದ ಮಾರ್ಚ್​ನಲ್ಲಿ 97.36ಲಕ್ಷ ರೂ.ಗೆ ಗುತ್ತಿಗೆ ವಹಿಸಿ ಕಾರ್ಯಾದೇಶ ನೀಡಲಾಗಿದೆ.
ಕಾಲೇಜಿಗೆ ಸಾಮಗ್ರಿ ಪುರೈಕೆಯಾಗಿದ್ದು, ಗುಣಮಟ್ಟ ಸರಿಯಾಗಿಲ್ಲವೆಂಬ ಆರೋಪ ಕೇಳಿ ಬಂದಿದೆ. ಕೆಲ ವಸ್ತುಗಳ ತೀರಾ ಕಳಪೆಯಾಗಿದ್ದು, ಮಾರುಕಟ್ಟೆಗಿಂತ ಅಧಿಕ ಬೆಲೆ ನೀಡಿ ಖರೀದಿಸಲಾಗಿದೆ ಎನ್ನಲಾಗುತ್ತಿದೆ.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಅವರಿಗೂ ವಿಷಯ ತಿಳಿದು ಕಾಲೇಜಿಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಎರಡು ದಿನದಲ್ಲಿ ಸಮಸ್ಯೆ ಸರಿಪಡಿಸುವಂತೆ ತಾಕೀತು ಮಾಡಿದ್ದಾರೆ. ಅವ್ಯವಸ್ಥೆ ಸರಿಪಡಿಸಲು ತಾಕೀತು ಮಾಡಿದ್ದಾರೆ. ಅಲ್ಲದೇ ಪೂರೈಕೆಯಾದ ವಸ್ತುಗಳ ಒಂದೊಂದು ಮಾದರಿ ಪಡೆದಿದ್ದಾರೆ. ಈ ಬಗ್ಗೆ ತಾವು ವೈಯಕ್ತಿಕವಾಗಿ ಗುಣಮಟ್ಟ ಹಾಗೂ ಮಾರುಕಟ್ಟೆ ದರದ ಮಾಹಿತಿ ಪಡೆಯುತ್ತಿದ್ದಾರೆ. ಕ್ರಿಯಾ ಯೋಜನೆ, ದರ, ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಬದಲಿ ವಸ್ತುಗಳ ಪೂರೈಕೆ
ಕ್ರೀಡಾ ವಿಭಾಗದಲ್ಲಿ ಪೂರೈಕೆಯಾದ ಕೆಲ ಆಟದ ಸಾಮಾನುಗಳು ಕಳಪೆಯಾಗಿವೆ. ಸಿಇಒ ಭೇಟಿ ನೀಡಿ ಕ್ರಮದ ಎಚ್ಚರಿಕೆ ನೀಡುತ್ತಲೇ ಬದಲಿ ವಸ್ತುಗಳನ್ನು ಗುತ್ತಿಗೆದಾರರು ಪುರೈಕೆ ಮಾಡಿದ್ದಾರೆ. ಕೆಲ ದಿನಗಳ ಹಿಂದಯೇ ಎಲ್ಲ ವಸ್ತುಗಳನ್ನು ಪೂರೈಸಲಾಗಿದೆ. ಜು.15ರಂದು ಸಿಇಒ ಕಾಲೇಜಿಗೆ ತೆರಲಿ ವೀಕ್ಷಸಿದ್ದಾರೆ. ಈ ಬೆನ್ನಲ್ಲೇ ಜು.18ರಂದು ಬೆಳಗ್ಗೆಯೇ 1.11 ಲಕ್ಷ ರೂ. ಮೌಲ್ಯದ ಬದಲಿ ಆಟದ ವಸ್ತುಗಳನ್ನು ಕಳುಹಿಸಲಾಗಿದೆ. ಹೀಗಾಗಿ ಒಟ್ಟಾರೆ ಪೂರೈಕೆಯಾದ ವಸ್ತುಗಳ ಗುಣಮಟ್ಟದ ಬಗ್ಗೆಯೂ ಅನುಮಾನ ಹೆಚ್ಚುವಂತೆ ಮಾಡಿದೆ.

ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಪುರೈಕೆಯಾದ ವಸ್ತುಗಳನ್ನು ಪರಿಶೀಲಿಸಿರುವೆ. ಎಲ್ಲ ವಸ್ತುಗಳ ಮಾದರಿ ಪಡೆದು ಗುಣಮಟ್ಟ ಹಾಗೂ ಮಾರುಕಟ್ಟೆ ದರ ಬಗ್ಗೆ ವರದಿ ಪಡೆಯುತ್ತಿರುವೆ. ಅವ್ಯವಹಾರ ನಡೆದಿದ್ದು ಗೊತ್ತಾದಲ್ಲಿ ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಇನ್ನೊಮ್ಮೆ ಕಾಲೇಜಿಗೆ ಭೇಟಿ ನೀಡುವೆ. ರಾಹುಲ್​ ರತ್ನಂ ಪಾಂಡೆಯ. ಜಿಪಂ ಸಿಇಒ ಕೊಪ್ಪಳ.

ರಾಹುಲ್​ ರತ್ನಂ ಪಾಂಡೆಯ. ಜಿಪಂ ಸಿಇಒ ಕೊಪ್ಪಳ.

ನಮ್ಮ ಕಾಲೇಜಿಗೆ ಕೆಕೆಆರ್​ಡಿಬಿ ಅನುದಾನದಡಿ ರಾಪೋಡಿಯಂ, ಕಂಪ್ಯೂಟರ್​ ಸೇರಿ ಇತರ ವಸ್ತುಗಳನ್ನು ಪೂರೈಸಲಾಗಿದೆ. ಆಟದ ಸಾಮಗ್ರಿಗಳು ಗುಣಮಟ್ಟ ಇರಲಿಲ್ಲ. ಈ ಬಗ್ಗೆ ಗುತ್ತಿಗೆದಾರರಿಗೆ ತಿಳಿಸಿದ್ದು, ಗುಣಮಟ್ಟದ ವಸ್ತುಗಳನ್ನು ಗುರುವಾರ ಪೂರೈಸಿದ್ದಾರೆ. ಇತರ ವಸ್ತುಗಳು ಗುಣಮಟ್ಟದಿಂದ ಕೂಡಿವೆ. ತಿಮ್ಮಾರೆಡ್ಡಿ ಮೇಟಿ. ಪ್ರಾಚಾರ್ಯ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ.

ತಿಮ್ಮಾರೆಡ್ಡಿ ಮೇಟಿ. ಪ್ರಾಚಾರ್ಯ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net