ಸರ್ಕಾರಿ ಕಾಲೇಜಿನ ಬಾಲಕಿಯರ ಸಾಧನೆ

UNTILETED
aÜÐÜŸ
Published on

ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಉತ್ತಮ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 287 ವಿದ್ಯಾರ್ಥಿಗಳ ಪೈಕಿ 125 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

10 ಡಿಸ್ಟಿಂಕ್ಷನ್, 75 ಪ್ರಥಮ, 25 ದ್ವಿತೀಯ ಶ್ರೇಣಿ ಹಾಗೂ 9 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಅಶ್ವಿನಿ 569, ಅಶ್ವಿನಿ ಹುಲಿಗೆಪ್ಪ 543, ಸಾಯಿನಾಜಾ ಬೇಗಂ 534, ವಾಣಿಜ್ಯ ವಿಭಾಗದಲ್ಲಿ ರೇಣುಕಾ 514, ಇರಂಬಿಕಾ 510, ಗೀತಾ 507, ವಿಜ್ಞಾನ ವಿಭಾಗದಲ್ಲಿ ನಯನಾಕ್ಷಿ 517, ಈರೇಶಮ್ಮ 513, ಚೈತನ್ಯ 490 ಅಂಕಗಳನ್ನು ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ರವೀಂದ್ರ ಬಂಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net