ಕರ್ತವ್ಯದ ನಡುವೆ ಹಕ್ಕು ಚಲಾಯಿಸಲು ಮರೆಯಲಿಲ್ಲ: ಮತದಾನ ಮಾಡಿ ಮಾದರಿಯಾದ ಸರ್ಕಾರಿ ಬಸ್ ಚಾಲಕ

Govt bus driver voting between duty mandya
Published on

ಮಳವಳ್ಳಿ: ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ತಪ್ಪದೇ ಮತದಾನ ಮಾಡಬೇಕೆಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಲೇ ಇದೆ. ಅದರಂತೆ ಕರ್ತವ್ಯ ಮಾಡುತ್ತಲೇ ಮತದಾನ ಹಕ್ಕು ಚಲಾಯಿಸಿ ಕೆಎಸ್‌ಟಿಸಿಬಸ್ ಚಾಲಕ ಮಾದರಿಯಾಗಿದ್ದಾರೆ.

ಮಳವಳ್ಳಿ ತಾಲೂಕಿನ ವಕ್ಕರಹಳ್ಳಿ ಗ್ರಾಮದ ಲಿಂಗರಾಜು ಮತ ಹಾಕಿದ ಚಾಲಕ. ಇವರು ಬೆಂಗಳೂರು ಚಂದ್ರ ಲೇಔಟ್ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಬೆಂಗಳೂರು-ಕೊಳ್ಳೆಗಾಲದ ಮಾರ್ಗದಲ್ಲಿ ಬಸ್ ಓಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯದ ನಡುವೆಯೂ ವಾಸುವಳ್ಳಿ ಮತಗಟ್ಟೆ ಸಂಖ್ಯೆ 265ರಲ್ಲಿ ಮತದಾನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net