ಉತ್ತರ ಕನ್ನಡ 9 ತಾಲೂಕುಗಳು ಬರ ಪೀಡಿತ

vegitable
Published on

ಕಾರವಾರ: ಉತ್ತರ ಕನ್ನಡ ಜಿಲ್ಲೆಯ 9 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷೊಸಲಾಗಿದೆ.
ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗದ ಸರ್ಕಾರದ‌ ಜಂಟಿ ಕಾರ್ಯದರ್ಶಿ ಟಿ.ಸಿ.ಕಾಂತರಾಜ್ ಘೋಷಣೆ ಮಾಡಿದ್ದಾರೆ.
ಅದರಲ್ಲಿ, ಹಳಿಯಾಳ, ಮುಂಡಗೋಡ,ಶಿರಸಿ ಮತ್ತು ಯಲ್ಲಾಪುರ ತಾಲೂಕುಗಳನ್ನು 161 ತೀವ್ರ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಅಂಕೋಲಾ, ಕಾರವಾರ, ಕುಮಟಾ, ಜೊಯಿಡಾ, ಭಟ್ಕಳ ತಾಲೂಕುಗಳನ್ನು ಸಾಧಾರಣ ಬರ ಪೀಡಿತವಾಗಿರುವ ರಾಜ್ಯದ 34 ತಾಲೂಕುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ನಿರೀಕ್ಷೆಯಂತೆ ಹೊನ್ನಾವರ, ಸಿದ್ದಾಪುರ‌ ಹಾಗೂ ದಾಂಡೇಲಿ ತಾಲೂಕುಗಳು ಬರದ‌ ಪಟ್ಟಿಯಿಂದ ಹೊರಗುಳಿದಿವೆ.
ಜಿಲ್ಲೆಯ 9 ತಾಲೂಕುಗಳನ್ನು ಮಾತ್ರ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಜಮೀನುಗಳಿಗೆ ತೆರಳಿ ಆ್ಯಪ್ ಮೂಲಕ ಜಂಟಿ ಬೆಳೆ ಸರ್ವೇ ನಡೆಸಿದ್ದರು.

ಬರ ಪೀಡಿತ‌ ಪ್ರಯೋಜನವೇನು..?
ಬರ ಪೀಡಿತ ತಾಲೂಕುಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಬಹುದು. ಬೆಳೆ ಹಾನಿಗೆ ಪರಿಹಾರ ವಿತರಿಸಬಹುದು. ಮೇವಿಗೆ ಪರ್ಯಾಯ ವ್ಯವಸ್ಥೆ ಮಾಡಬಹುದು. ಸರ್ಕಾರದಿಂದ‌ ಇದಕ್ಕಾಗಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net