ಕ್ರೀಡೆಯಿಂದ ಸ್ಪರ್ಧಾ ಮನೋಭಾವ, ಗೋವಿಂದದಾಸ ಕಾಲೇಜಿನಲ್ಲಿ ಜಯಚಂದ್ರ ಹತ್ವಾರ್ ಆಶಯ

govindadas
ಗೋವಿಂದದಾಸ ಪ್ರೀಮಿಯರ್ ಲೀಗ್ ಸೀಸನ್ - 05 ಕ್ರಿಕೆಟ್ ಪಂದ್ಯಾಟವನ್ನು ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಉದ್ಘಾಟಿಸಿದರು. ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ, ಉಪ ಪ್ರಾಚಾರ್ಯ ಪ್ರೊ.ರಮೇಶ್ ಭಟ್ ಉಪಸ್ಥಿತರಿದ್ದರು.
Published on

ಮಂಗಳೂರು: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಉತ್ತಮ ಸ್ಪರ್ಧಾ ಮನೋಭಾವ ಬೆಳೆಸಲು ಕ್ರೀಡೆ ಸಹಕಾರಿಯಾಗಿದೆ. ಕ್ರಿಕೆಟ್ ಯುವಜನರ ಮೆಚ್ಚಿನ ಕ್ರೀಡೆಯಾಗಿದ್ದು, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹಿಂದೂ ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಹೇಳಿದರು.

ಸುರತ್ಕಲ್‌ನ ಗೋವಿಂದದಾಸ ಕಾಲೇಜಿನ ಕ್ರೀಡಾ ವಿಭಾಗದ ವತಿಯಿಂದ ನಡೆದ ಗೋವಿಂದದಾಸ ಪ್ರೀಮಿಯರ್ ಲೀಗ್ ಸೀಸನ್ - 05 ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಪ್ರೊ.ರಮೇಶ್ ಭಟ್ ಉಪಸ್ಥಿತರಿದ್ದರು. ವೈಭವಿ ಸ್ವಾಗತಿಸಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ. ವಂದಿಸಿದರು. ಸ್ವಾತಿ ಭಟ್ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಎಚ್. ಮುಖ್ಯ ಅತಿಥಿಯಾಗಿದ್ದರು.

ಸ್ವಾತಿ ಎಂ ಸ್ವಾಗತಿಸಿ, ನವನೀತ್ ವಂದಿಸಿದರು. ಪಂದ್ಯಾಟದಲ್ಲಿ ಸೀ ಹಾಕ್ಸ್ ತಂಡ ಪ್ರಥಮ ಹಾಗೂ ರೋರಿಂಗ್ ಲಯನ್ಸ್ ತಂಡ ದ್ವಿತೀಯ ಸ್ಥಾನ ಪಡೆದವು.ಪ್ರಜ್ವಲ್ ಉತ್ತಮ ಬ್ಯಾಟ್ಸ್‌ಮ್ಯಾನ್ , ಪ್ರಥಮ್ ಉತ್ತಮ ಎಸೆತಗಾರ, ನಿಹಾಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net