ಗೋವಿಂದ ಭಟ್ಟರಿಗೆ ಯಕ್ಷ ವಿದ್ಯಾವಾನ್ಯ ಪ್ರಶಸ್ತಿ ಪ್ರದಾನ

yakshagana
ತೆಂಕುತಿಟ್ಟು ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ಟ ಅವರಿಗೆ ಪಲಿವಾರು ಶ್ರೀಗಳು ‘ಯಕ್ಷ ವಿದ್ಯಾವಾನ್ಯ’ ಪ್ರಶಸ್ತಿ ಪ್ರದಾನ ಮಾಡಿದರು.
Published on

ಉಡುಪಿ: ತೆಂಕುತಿಟ್ಟು ಯಕ್ಷಗಾನದ ಶ್ರೇಷ್ಠ ಕಲಾವಿದ ಕೆ. ಗೋವಿಂದ ಭಟ್ ಅವರಿಗೆ ಇತ್ತೀಚೆಗೆ ನಡೆದ ಪಲಿವಾರು ಮಠದ ಶ್ರೀ ಯೋಗವಿದ್ಯಾಪೀಠದ ಟಿಕೋತ್ಸವದಲ್ಲಿ ಪಲಿವಾರು ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು 50 ಸಾವಿರ ರೂ. ನಗದ ಸಹಿತ ‘ಯಕ್ಷ ವಿದ್ಯಾವಾನ್ಯ’ ಪ್ರಶಸ್ತಿ ಪ್ರದಾನ ವಾಡಿದರು.

ಹಿರಿಯ ವಿದ್ವಾಂಸ ಪಂಜ ಭಾಸ್ಕರ ಭಟ್ ಅಭಿನಂದನಾ ಮಾತುಗಳನ್ನಾಡಿದರು. ಕಾಣಿಯೂರು ಶ್ರೀ, ಸುಬ್ರಹ್ಮಣ್ಯ ಶ್ರೀ, ಸೋದೆ ಮತ್ತು ಪಲಿವಾರು ಮಠದ ಕಿರಿಯ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ಪಲಿವಾರು ಸ್ವಾಮೀಜಿಗಳು ಒಂದು ದಶಕದಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ ನೀಡುವ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಪಾಕತಜ್ಞ ಕೆ.ಶ್ರೀಧರ ಭಟ್, ವೈದಿಕ ವಿದ್ವಾನ್ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ಅವರಿಗೆ ಶ್ರೀ ಮಠದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net