ವಿಜಯವಾಣಿ ಸುದ್ದಿಜಾಲ ಗದಗ
ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯ ಸಿ.ಎಸ್.ಷಡರಿ ಅವರು ನೌಕರರ ಹಿತವನ್ನು ಕಾಪಾಡಿ ನೌಕರ ಪರವಾಗಿ ಹಲವು ಹೋರಾಟ ಮಾಡಿದ್ದಾರೆ. ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅಪ ಪ್ರಚಾರ ಮಾಡುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರ ಸಂದಿಂದ ನಗರ ಚುನಾವಣಾ ತಹಸೀಲ್ದಾರ ಎಸ್. ಎಂ. ಹಿರೇಮಠರಿಗೆ ಮನವಿ ನೀಡಿ ಕಾನೂನು ಕ್ರಮಕ್ಕೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿ ಗುಂಜೀಕರ್, ಷಢಕ್ಷರಿ ಅವರ ಅಧಿ-ಕಾರ ಅವಧಿ-ಯಲ್ಲಿ ನಡೆಯುತ್ತಿರುವ ಹೋರಾಟದಿಂದಾಗಿ ಶೇ.17 ರಷ್ಟು ಮದ್ಯಂತರ ಪರಿಹಾರ ಸೇರಿದಂತೆ ಅಸಂಖ್ಯಾತ ಬೇಡಿಕೆಗಳು ಈಡೇರಿವೆ. ರಚನಾತ್ಮಕ ಮತ್ತು ಸಂಟನಾತ್ಮಕ ಹೋರಾಟದ ಲವಾಗಿ 5.25 ಲ ನೌಕರರು ಕ್ರೀಯಾಶೀಲರಾಗಿದ್ದಾರೆ. ಎನ್.ಪಿ.ಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗಾಗಿ ರಾಜ್ಯ ಸರ್ಕಾರ ಅಪರ ಮುಖ್ಯ ಕಾರ್ಯದಶಿರ್ಗಳ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚನೆ, ಸರ್ಕಾರಿ ನೌಕರರ ಮತ್ತು ಅವರ ಅವಲಭಿತರಿಗಾಗಿ ವೈದ್ಯಕಿಯ ಸೌಲಭ್ಯಗಳನ್ನು ನಗದುರಹಿತವಾಗಿ ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿ, ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಸಂಭವಿಸಿರುವ ಪ್ರವಾಹ ಸಂತ್ರಸ್ಥರಿಗಾಗಿ 200 ಕೋಟಿ ರೂ ದೇಣಿಗೆ, ಕೋವಿಡ್ 19 ನಿಯಂತ್ರಣಕ್ಕಾಗಿ ನೌಕರರ ಒಂದು ದಿನದ ವೇತನ 200 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಕ್ಕೆ ದೇಣಿಗೆ ಸೇರಿದಂತೆ ಅಸಂಖ್ಯಾತ ಕಾರ್ಯಗಳನ್ನು ಮಾಡುವ ಮೂಲಕ ನೌಕರರ ಸಮಸ್ಯೆಗಳಿಗೆ ಕ್ಷಡಕ್ಷರಿ ಅವರು ಸ್ಪಂಧಿಸಿದ್ದಾರೆ. ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಅಪಪ್ರಚಾರದಲ್ಲಿ ತೊಡಗಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಧೀನ ಕಾರ್ಯದಶಿರ್ ಶಾಂತಾರಾಮ, ಶಾಖಾಧಿಕಾರಿ ಗುರುಸ್ವಾಮಿ, ಮೆಹಬೂಬ ಬಾಷ ಎಂ, ನಿಂಗೇಗೌಡ್ರು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದರು. .
ಗದಗ ಚುನಾವಣಾ ವಿಭಾಗದ ತಹಸೀಲ್ದಾರ ಎಸ್.ಎಂ.ಹಿರೇಮಠ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ರವಾನಿಸುವ ಭರವಸೆಯನ್ನು ನೀಡಿದರು.
ಸಿದ್ದಪ್ಪ ಲಿಂಗದಾಳ, ಮಲ್ಲಿಕಾರ್ಜುನ ಹನಸಿ, ಡಿ.ಬಿ.ಬೇಲೇರಿ, ಅಜಯ ಕುಮಾರ ಕಲಾಲ, ಮಂಜುನಾಥ, ಮಹಾಂತೇಶ ಚುಚಿರ್ಹಾಳ, ಮೇಲಮನಿ ಇದ್ದರು.