ಬೆಳ್ತಂಗಡಿ: ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ.ಬೆಳ್ತಂಗಡಿ ಲಯನ್ಸ್ ಕ್ಲಬ್ಗೆ ನ.23ರಂದು ಅಧಿಕೃತ ಭೇಟಿ ನೀಡಲಿದ್ದು, ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ 12 ಲಕ್ಷ ರೂ.ಮೊತ್ತದ ವಿವಿಧ ಸೇವಾ ಕಾರ್ಯಗಳ ಉದ್ಘಾಟನೆ ಮಾಡಲಿದ್ದಾರೆ ಎಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ದೇವದಾಸ್ ಶೆಟ್ಟಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಳ್ತಂಗಡಿ ಲಯನ್ಸ್ ಕ್ಲಬ್ 51ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ಈ ವರ್ಷ ಜುಲೈಯಿಂದ ಸಮಾಜಮುಖಿ ಸೇವಾ ಕಾರ್ಯಗಳಾದ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಇಬ್ಬರಿಗೆ ತಲಾ 30 ಸಾವಿರ ಪ್ರೋತ್ಸಾಹ ನಿಧಿ, ಗುರುವಾಯನಕೆರೆ ಶಾಲೆ ಅತಿಥಿ ಶಿಕ್ಷಕರಿಗೆ ಗೌರವ ಧನ, ಕಣ್ಣಿನ ಚಿಕೆತ್ಸೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಧನ ಸಹಾಯ, ಕ್ರೀಡಾಕೂಟ, ವೃತ್ತಿ ಮಾರ್ಗದರ್ಶನ ತರಬೇತಿ, ಹಿರಿಯ ನಾಗರಿಕರಿಗೆ ಸನ್ಮಾನ, ವನ ಮಹೋತ್ಸವ, ವೃದ್ಧಾಶ್ರಮ ಮತ್ತು ಸಾನಿಧ್ಯ ಕೌಶಲ ಕಲಾ ಕೇಂದ್ರ, ದಯಾ ವಿಶೇಷ ಶಾಲೆಗೆ ಆಹಾರ ಸಾಮಗ್ರಿ ವಿತರಣೆ, ಓಣಂ ಆಚರಣೆ, ಶಿಕ್ಷಕರಿಗೆ ಗೌರವಾರ್ಪಣೆ, ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ಶಿಬಿರ, ಗಾಲಿ ಕುರ್ಚಿ ವಿತರಣೆ, ಗಾಂಧಿ ಜಯಂತಿ, ಸ್ವಚ್ಛತೆ, ಕಾಪಿನಡ್ಕ, ಸವಣಾಲು ಶಾಲೆಗೆ ಕಂಪ್ಯೂಟರ್ ಕೊಡುಗೆ, ಆಹಾರ ಕಿಟ್ ಉಚಿತ ವಿತರಣೆ, ದೀಪಾವಳಿ ಆಚರಣೆ, ಬದ್ಯಾರ್ ನಿವಾಸಿಗೆ ಕೃತಕ ಕಾಲಿನ ವ್ಯವಸ್ಥೆ, ಅಂತಾರಾಷ್ಟ್ರೀಯ ಫೌಂಡೇಷನ್ಗೆ 5 ಲಕ್ಷ ರೂ.ದೇಣಿಗೆ ಮೊದಲಾದ ಸೇವಾ ಮಾಡುತ್ತಿದೆ.
ಗವರ್ನರ್ ಭೇಟಿಯಂದು ಬದ್ಯಾರ್ ಕಾಪಿನಡ್ಕ, ಗುಂಡೇರಿ, ಪೇರಲ್ ತೇರಕಟ್ಟೆ ಗೇರುಕಟ್ಟೆ ಬಸ್ ತಂಗುದಾಣಗಳ ಉದ್ಘಾಟನೆ, ಮತ್ತು ನವೀಕರಣ ಬಸ್ ನಿಲ್ದಾಣದ ಉದ್ಘಾಟನೆ, ಅಳದಂಗಡಿ ಸರ್ಕಾರಿ ಕಾಲೇಜಿಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ, 25 ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ, ಬಂಗಾಡಿ ಸರ್ಕಾರಿ ಶಾಲೆ ಇ-ಲ್ಯಾಬೊರೇಟರಿ ಉದ್ಘಾಟನೆ, ಇಂದಬೆಟ್ಟು ಶಾಲೆಗೆ ನವೀನ ರೀತಿಯ ಬಣ್ಣ, ಮುಡಾಯಿಬೆಟ್ಟು ಶಾಲೆಗೆ ಕಪಾಟು ಕೊಡುಗೆ, ಬಳಂಜ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೆ ಟೇಬಲ್ ಹಸ್ತಾಂತರ ಸೇವಾ ಕಾರ್ಯಕ್ರಮ ನಡೆಯಲಿದೆ ಎಂದರು.
ಲಯನ್ಸ್ ಕ್ಲಬ್ ಪೂರ್ವ ಅಧ್ಯಕ್ಷ ಅಶೋಕ್ ಕುಮಾರ್, ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ, ಸದಸ್ಯ ಲಕ್ಷ್ಮಣ ಪೂಜಾರಿ, ಮಾಧ್ಯಮ ಕಾರ್ಯದರ್ಶಿ ತುಕಾರಾಮ ಬಿ. ಇದ್ದರು.