ಸೆಂಟ್ ಜಾನ್ ಶಾಲೆಗೆ ರಾಜ್ಯಪಾಲರ ಪ್ರಶಸ್ತಿ

20-GPT-3
ಬೆಂಗಳೂರಿನ ರಾಜಭವನದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಪ್ರಶಸ್ತಿ ಪಡೆದ ಗುಂಡ್ಲುಪೇಟೆ ಪಟ್ಟಣದ ಸೆಂಟ್ ಜಾನ್ ಶಾಲೆಯ ಬುಲ್ ಬುಲ್ಸ್‌ನ ವಿದ್ಯಾರ್ಥಿಗಳು. ಪಿ.ಜಿ.ಆರ್. ಸಿಂಧ್ಯಾ, ಆಂಜನೇಯ ಇತರರಿದ್ದರು.
Published on

ಗುಂಡ್ಲುಪೇಟೆ : ಪಟ್ಟಣದ ಸೆಂಟ್ ಜಾನ್ ಶಾಲೆಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಬುಲ್ ಬುಲ್ಸ್‌ನ ವಿದ್ಯಾರ್ಥಿಗಳು ರಾಜ್ಯಪಾಲರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಶುಕ್ರವಾರ ಬೆಂಗಳೂರಿನ ರಾಜ ಭವನದಲ್ಲಿ ಆಯೋಜಿಸಿದ್ದ ಚತುರ್ಥ ಚರಣ್ ಕಬ್ಸ್, ಹೀರಕ್ ಪಂಖ್ ಬುಲ್ ಬುಲ್ಸ್ ಮತ್ತು ರಾಜ್ಯ ಪುರಸ್ಕೃತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ರೋವರ್ ರೇಂಜರ್ಸ್‌ಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ರಾಜ್ಯಪಾಲ ಪ್ರಶಸ್ತಿಗೆ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಸೆಂಟ್ ಜಾನ್ ಶಾಲೆಯ ವಿದ್ಯಾರ್ಥಿಗಳಾದ ವರ್ಷಾ, ತೇಜು ಮತ್ತು ಕಿಶೋರ್ ಅವರು ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಂದ ಪ್ರಶಸ್ತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಕರ್ನಾಟದ ಕಮೀಷನರ್ ಪಿ.ಜಿ.ಆರ್. ಸಿಂಧ್ಯಾ ಹಾಗೂ ಇತರರು ಇದ್ದರು. ರಾಜ್ಯಪಾಲರ ಪ್ರಶಸ್ತಿ ಪಡೆಯಲು ಸೂಕ್ತ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಆಂಜನೇಯ ನೇತೃತ್ವದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸುನೀತಾ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net