

ಧಾರವಾಡ: ಅಯೋಧ್ಯೆ ಶ್ರೀರಾಮನ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸರ್ಕಾರ ಮತ್ತು ಧರ್ಮ ಮಿಶ್ರಿತ ಆಗಬಾರದು. ಸರ್ಕಾರಗಳು ಧರ್ಮದಿಂದ ಅಂತರ ಕಾಪಾಡಿಕೊಳ್ಳಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಹುದ್ದೆ ಸಂವಿಧಾನದ ಶಕ್ತಿಯುತ ಸ್ಥಾನ. ಅವರು ಧರ್ಮದಿಂದ ಅಂತರ ಕಾಪಾಡಿಕೊಳ್ಳಬೇಕು. ಸಾಂವಿಧಾನಿಕ ಸ್ಥಾನದಲ್ಲಿ ಧರ್ಮ ಇರಬಾರದು. ಅಯೋಧ್ಯೆಗೆ ಟ್ರಸ್ಟ್ ಮಾಡಲಾಗಿದ್ದು, ಅದಕ್ಕೆ ಸಮಗ್ರ ಜವಾಬ್ದಾರಿ ನೀಡಬೇಕು. ಅಯೋಧ್ಯೆ ಮಂದಿರ ಇನ್ನೂ ಪೂರ್ಣಗೊಳ್ಳುವ ಮೊದಲೇ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಅವಸರ ಮÁಡುತ್ತಿದ್ದಾರೆ. ಪ್ರತಿಪಕ್ಷಲ್ಲಿರುವ ಕಾಂಗ್ರೆಸ್ ಮಾಡಬಾರದ್ದನ್ನೆಲ್ಲ ಮಾಡಿದ್ದಕ್ಕೆ ದೇಶದಲ್ಲಿ ಇಂದು ಬಿಜೆಪಿ ಅಽಕಾರಕ್ಕೆ ಬಂದಿದೆ ಎಂದರು.
ಪ್ರಧಾನಿ ೧೧ ದಿನ ಉಪವಾಸ ಮÁಡುತ್ತಿದ್ದಾರೆ. ಅವರಿಗೆ ಅಂತರಾಳವಿದ್ದರೆ ಸುಳ್ಳು ಹೇಳಬಾರದು. ಅನ್ಯರಿಗೆ ಅಸಹ್ಯ ಪಡಬಾರದು. ಆದರೆ, ವಿರೋಽಗಳನ್ನು ಲೋಕಸಭೆಯಲ್ಲಿ ಏನು ಮಾಡಿದರು ಗೊತ್ತಲ್ವಾ? ಅವರು ಖಾವಿ ಬಟ್ಟೆ ಹಾಕಿಕೊಳ್ಳಲಿ. ರಾಮನ ಭಕ್ತರಾಗಿದ್ದರೆ ರಾಮನಂತೆ ನಡೆದುಕೊಳ್ಳಬೇಕು. ಅಽಕಾರ ದುರುಪಯೋಗ ಮಾಡಬಾರದು. ದೇಶದ ಹಳ್ಳಿಗಳಲ್ಲಿ ಮುಗ್ಧ ಜನರಿದ್ದಾರೆ. ಆ ಜನರಲ್ಲಿರುವ ಧರ್ಮ ನಂಬಿಕೆಯ ದುರುಪಯೋಗ ಆಗಬಾರದು ಎಂದರು.