ಹೈನುಗಾರಿಕೆ ಹೆಚ್ಚಳಕ್ಕೆ ಸರ್ಕಾರದ ಪ್ರೋತ್ಸಾಹ

ldh1 (3)
Published on

ಲಿಂಗದಹಳ್ಳಿ: ನಂದಿಬಟ್ಟಲು ಕಾಲನಿ, ಸೈದು ಖಾನ್, ವರ್ತೆಗುಂಡಿ, ನಂದಿಬಟ್ಟಲು ಗ್ರಾಮಗಳ ರೈತರಿಗೆ ಹಾಲು ವಿಲೇವಾರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್.ಟಿ.ಸೋನಾಲ್ ಗೌಡರ ಮಾರ್ಗದರ್ಶನದಲ್ಲಿ ನಂದಿಬಟ್ಟಲು ಕಾಲನಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಸ್ಥಾಪಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಶಾಂತಮ್ಮ ಹೇಳಿದರು.

ನಂದಿಬಟ್ಟಲು ಕಾಲನಿ ಗ್ರಾಮದಲ್ಲಿ ನೂತನಾಗಿ ಆರಂಭವಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಘಟಕ ಉದ್ಘಾಟಿಸಿ ಮಾತನಾಡಿ, ಹೈನುಗಾರರಿಗೆ ಸರ್ಕಾರದಿಂದ ಹಾಲು ಉತ್ಪಾದನೆ ಮಾಡಲು ರಾಸುಗಳ ಖರೀದಿಗೆ ಸಹಾಯಧನ ಕೊಂಡುಕೊಳ್ಳಲು ಸಹಾಯಧನ, ನಿರ್ದೇಶಕರಿಗೆ ತರಬೇತಿ, ಪ್ರಾತ್ಯಕ್ಷಿಕೆ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೈನುಗಾರರು ಹಾಲು ಉತ್ಪಾದಕ ಸಂಘದ ಮೂಲಕ ಹಾಲನ್ನು ವಿಲೇವಾರಿ ಮಾಡಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷೆ ಗೀತಾ ಮಂಜುನಾಥ, ಉಪಾಧ್ಯಕ್ಷೆ ಹಾಸ್ಯಬೇಗಂ ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಎ.ಕೃಷ್ಣನಾಯ್ಕ, ಮಾಜಿ ಅಧ್ಯಕ್ಷರಾದ ಎನ್.ಜೆ.ಭದ್ರೇಗೌಡ, ಎನ್.ಪಿ.ಕೃಷ್ಣೇಗೌಡ , ಎ.ಮೋಹನ ರಾಜು, ಅಬುಬಕರ್ ಕುಟ್ಟಿ, ಸದಸ್ಯರಾದ ತುಂಗಾ ಬಾಯಿ ಮಾಜಿ ಸದಸ್ಯರಾದ ರಾಮಯ್ಯ, ಪಿಡಿಒ ಎನ್.ಎಸ್. ನಾಗರಾಜಪ್ಪ, ಗ್ರಾಮಸ್ಥರುಗಳಾದ ನರಸಿಂಹಮೂರ್ತಿ, ಶಿವಣ್ಣ, ಗಂಗಾನಾಯ್ಕ, ರಮೇಗೌಡ ಅಬ್ದುಲ್ ಗಾರ್, ಹೆಚ್.ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net