ಪ್ರತಿಭಟನೆ ಹತ್ತಿಕ್ಕಲು ಸರ್ಕಾರದ ಪ್ರಯತ್ನ

12hnd-3 protest
ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ಹುನಗುಂದ ಮತ್ತು ಇಳಕಲ್ಲ ತಾಲೂಕು ಸಮಾಜದ ಮುಖಂಡರು ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ಬಸವರಾಜ ಕಡಪಟ್ಟಿ, ಪ್ರಕಾಶ ಕಠಾಣಿ ಇದ್ದರು.
Published on

ಹುನಗುಂದ: ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಮಾಡಿದ್ದನ್ನು ಖಂಡಿಸಿ ಪಟ್ಟಣದ ವಿಜಯ ಮಹಾಂತೇಶ ವೃತ್ತ್ತದಲ್ಲಿ ಹುನಗುಂದ ಮತ್ತು ಇಳಕಲ್ಲ ತಾಲೂಕಿನ ಪಂಚಮಸಾಲಿ ಸಮಾಜದ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2(ಎ) ಮೀಸಲಾತಿಗೆ ನಡೆಸುತ್ತಿದ್ದ ಪ್ರತಿಭಟನಕಾರರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಖಂಡನೀಯ. ಸರ್ಕಾರವು ಪ್ರತಿಭಟನೆ ಹತ್ತಿಕ್ಕುವ ದುರುದ್ದೇಶದಿಂದ ಲಾಠಿ ಚಾರ್ಜ್ ಮಾಡಿಸಿದೆೆ. ಸಮಾಜದ ಜನಪ್ರತಿನಿಧಿಗಳು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಒಳಗೆ ಧ್ವನಿ ಎತ್ತಬೇಕು ಎಂದು ಹೇಳಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ನೀಡಿದ ಹೇಳಿಕೆಯಂತೆ ನಡೆದುಕೊಳ್ಳಬೇಕು. ಬೆಳಗಾವಿಯಲ್ಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಪಂಚಮಸಾಲಿ ಮುಖಂಡರ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ನಿರಾಣಿ ಒತ್ತಾಯಿಸಿದರು.

ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಜಿ.ಪಿ. ಪಾಟೀಲ ಮಾತನಾಡಿ, ಪಕ್ಷದವರಿಗೂ ನಮ್ಮ ಮತ ಬೇಕು. ಆದರೆ, ನಮ್ಮ ಅಸ್ತಿತ್ವಕ್ಕಾಗಿ ನಾವು ಹೋರಾಟ ಮಾಡಬೇಕಾಗಿದೆ. ಸಮಾಜದ ರಾಜಕೀಯ ನಾಯಕರು ತಮ್ಮ ಸ್ವ ಹಿತಾಸಕ್ತಿಗೆ ಸಮಾಜವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಡಾ. ಮಹಾಂತೇಶ ಕಡಪಟ್ಟಿ, ರಾಜಕುಮಾರ ಬಾದವಾಡಗಿ, ಮಹಾಂತೇಶ ಹಳ್ಳೂರು, ಬಸವರಾಜ ಕಡಪಟ್ಟಿ, ಪ್ರಕಾಶ ಕಠಾಣಿ, ಅಜ್ಜಪ್ಪ ನಾಡಗೌಡ, ಸಂಗಣ್ಣ ಹೊಸೂರ, ಶಿವಪ್ರಸಾದ ಗದ್ದಿ, ರಾಜು ನಾಡಗೌಡ, ಸಂಗಮೇಶ ಭಾವಿಕಟ್ಟಿ, ಶಿವಪ್ಪ ನಾಗೂರ, ಸಂಗಪ್ಪ ತೋಟದ, ಪ್ರವೀಣ ಹಳಪೇಟೆ, ಮಹಾಂತೇಶ ನಾಡಗೌಡ, ಅಶೋಕ ಭಾವಿಕಟ್ಟಿ, ಬಸವರಾಜ ಗೊಣ್ಣಾಗರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net